KARNATAKA
ಫೈಟರ್ ಜೆಟ್ ಹಾರಿಸಿ ಇತಿಹಾಸ ಸೃಷ್ಟಿದ ತಂದೆ- ಮಗಳು
ಬೀದರ್, ಜುಲೈ 06: ಬೀದರ್ ಜಿಲ್ಲೆಯ ವಾಯುಪಡೆ ಸ್ಟೇಷನ್‍ನಲ್ಲಿ ಒಟ್ಟಿಗೆ ಫೈಟರ್ ಜೆಟ್ ಹಾರಿಸುವ ಮೂಲಕ ಭಾರತೀಯ ವಾಯುಪಡೆಯಲ್ಲೇ ತಂದೆ- ಮಗಳು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಬೀದರ್‌ನ ಐಎಎಫ್ ಸ್ಟೇಷನ್‍ನಲ್ಲಿ ತಂದೆ- ಮಗಳ ಜೋಡಿ ಹಾಕ್- 132 ವಿಮಾನ ಒಟ್ಟಿಗೆ ಹಾರಿಸಿದೆ. ಈ ಮೂಲಕ ಭಾರತೀಯ ವಾಯುಪಡೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಗಿದೆ.
ಫ್ಲೈಯಿಂಗ್ ಆಫೀಸರ್ ಮಗಳು ಅನನ್ಯಾ ಶರ್ಮಾ ಹಾಗೂ ಏರ್ ಕಮಾಂಡರ್ ತಂದೆ ಸಂಜಯ್ ಶರ್ಮಾರಿಂದ ಮೊದಲ ಬಾರಿಗೆ ಈ ಇತಿಹಾಸ ಸೃಷ್ಟಿಸಲಾಗಿದೆ. ಭಾರತೀಯ ವಾಯು ಪಡೆಯಲ್ಲಿ ಈ ಸಾಧನೆ ಮಾಡಿದ ಮೊದಲ ತಂದೆ- ಮಗಳ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಮಗಳು ಅನನ್ಯಾ ಉನ್ನತ ಯುದ್ಧ ವಿಮಾನದಲ್ಲಿ ಪದವಿ ಪಡೆದು ತರಬೇತಿ ಪಡೆಯುತ್ತಿರುವ ಮೊದಲ ತರಬೇತುದಾರರಾಗಿದ್ದಾರೆ.