Connect with us

UDUPI

ವಿದ್ಯುತ್ ಶಾಕ್ ಗೆ ರೈತ ಬಲಿ ..ಕೆಲಸ ಮಾಡುತ್ತಿದ್ದ ಗದ್ದೆಯಲ್ಲೇ ಸಾವು

ಉಡುಪಿ ಜುಲೈ 9:ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನಿಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ.


ಮೃತರನ್ನು ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಜಾರ್ ಜೆಡ್ಡು ನಿವಾಸಿ ಸಾಧು(70) ಎಂದು ಗುರುತಿಸಲಾಗಿದೆ. ಇವರು ಗದ್ದೆಯನ್ನು ಹದ ಮಾಡುತ್ತಿದ್ದ ಸಂದರ್ಭ ಕರೆಂಟ್ ವೈರ್ ಕಟ್ಟಾಗಿ ಬಿದ್ದಿದ್ದು, ಅದು ರೈತ ಸಾಧು ಅವರಿಗೆ ತಗುಲಿ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Facebook Comments

comments