Connect with us

UDUPI

ಆಭರಣ ಪೆಟ್ಟಿಗೆ ತಯಾರಿಕಾ ಘಟಕ ಬೆಂಕಿಗೆ ಆಹುತಿ

ಉಡುಪಿ ಜುಲೈ 10: ಆಭರಣಗಳನ್ನು ಇಡುವ ಪೆಟ್ಟಿಗೆ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿ ಇಡೀ ಉತ್ಪಾದನಾ ಘಟಕ ಬೆಂಕಿಗೆ ಆಹುತಿಯಾದ ಘಟನೆ ಕಾರ್ಕಳ ತಾಲೂಕಿನ ಮಂಡ್ಕೂರು ಗ್ರಾಮದಲ್ಲಿ ನಡೆದಿದೆ.

ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯೆ ಸ್ವಾತಿ ಸುಧೀರ್ ಶೆಣೈ ಮಾಲಕತ್ವದ ಮೆ.ಸ್ವಾತಿ ಪ್ರೊಸೆಸರ್ಸ್ ಎಂಬ ಆಭರಣಗಳ ಪೆಟ್ಟಿಗೆಗಳ ಉತ್ಪಾದನಾ ಘಟಕ ಇದಾಗಿದ್ದು, ಘಟಕದಲ್ಲಿ ಕೋವಿಡ್-19 ಲಾಕ್ ಡೌನ್ ಕಾರಣದಿಂದ ಮಾರಾಟವಾಗದೇ ಉಳಿದಿದ್ದ ಸಿದ್ದ ವಸ್ತುಗಳು,ಕಚ್ಚಾ ವಸ್ತುಗಳು ಇದ್ದವು. ಬೆಂಕಿಯ ಕೆನ್ನಾಲಿಗೆಗೆ ಇವುಗಳೊಂದಿಗೆ ಸಂಸ್ಥೆಯ ಕಂಪ್ಯೂಟರ್ ಗಳು ಸುಟ್ಟು ಕರಕಲಾಗಿವೆ.

ಘಟನೆಯಲ್ಲಿ ಸುಮಾರು 15 ಲಕ್ಷ ರೂ. ಮೌಲ್ಯದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿನ ನಂದಿಸಿದ್ದಾರೆ.

 

Facebook Comments

comments