Connect with us

MANGALORE

ಪ್ರಪಂಚದಾದ್ಯಂತ ಸಾಮಾಜಿಕ ಜಾಲತಾಣಗಳಾದ ಫೆಸ್ಬುಕ್, ಇನ್ಸ್ಟಾಗ್ರಾಂ ಹಾಗೂ ವಾಟ್ಸಪ್ ಸ್ತಬ್ದ

ಪ್ರಪಂಚದಾದ್ಯಂತ ಸಾಮಾಜಿಕ ಜಾಲತಾಣಗಳಾದ ಫೆಸ್ಬುಕ್, ಇನ್ಸ್ಟಾಗ್ರಾಂ ಹಾಗೂ ವಾಟ್ಸಪ್ ಸ್ತಬ್ದ

ಮಂಗಳೂರು ಜುಲೈ 3: ಪ್ರಪಂಚದ ಕೆಲವು ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳಾದ ಫೆಸ್ಬುಕ್, ಇನ್ಸ್ಟಾಗ್ರಾಂ, ಹಾಗೂ ವಾಟ್ಸಪ್ ಸ್ತಬ್ದವಾಗಿರುವ ಬಗ್ಗೆ ವರದಿಯಾಗಿದೆ. ನಮ್ಮ ದೇಶದಲ್ಲೂ ಇಂದು ಮಧ್ಯಾಹ್ನದಿಂದ ಫೆಸ್ಬುಕ್, ಇನ್ಸ್ಟಾಗ್ರಾಂ ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ಬಳಕೆದಾರರಿಗೆ ವಿಡಿಯೋ ವೀಕ್ಷಣೆ, ಪೋಟೋ ಅಪ್ಲೋಡ್ ನಲ್ಲಿ ಭಾರಿ ಸಮಸ್ಯೆ ಕಾಣಿಸಿಕೊಂಡಿದ್ದು, ಜಾಲತಾಣಗಳಿಗೆ ಲಾಗಿನ್ ಕೂಡ ಆಗಲು ಸಮಸ್ಯೆ ಆಗುತ್ತಿರುವ ಬಗ್ಗೆ ವರದಿಯಾಗಿದೆ.

ಅಲ್ಲದೆ ಸಂಜೆ ನಂತರ ವಾಟ್ಸಪ್ ಕೂಡ ಸ್ತಬ್ದ ವಾಗಿದ್ದು, ವಾಟ್ಸಪ್ ಸಂದೇಶಗಳು ತಲುಪಲು ವಿಳಂಬ ಹಾಗೂ ವಾಟ್ಸಪ್ ನಲ್ಲಿ ವಿಡಿಯೋ ಪೋಟೋ ಡೌನ್ ಲೋಡ್ ಕೂಡ ಆಗದೆ ಸಮಸ್ಯೆ ಸೃಷ್ಟಿಸಿದೆ.

ಈ ಬಗ್ಗೆ ಫೇಸ್ಬುಕ್ ಸ್ಪಷ್ಟನೆ ನೀಡಿದ್ದು ಪ್ರಪಂಚದ ಕೆಲವು ಭಾಗಗಳಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಸರ್ವರ್ ಗಳಲ್ಲಿನ ಸಮಸ್ಯೆಯಿಂದಾಗಿ ಬಳಕೆದಾರರ ಈ ರೀತಿಯ ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆ ಸರಿಪಡಿಸಲು ಫೆಸ್ಬುಕ್ ನ ತಂತ್ರಜ್ಞರು ಕಾರ್ಯಪ್ರವೃತರಾಗಿದ್ದು, ಶೀಘ್ರದಲ್ಲೆ ಸಮಸ್ಯೆ ಬಗೆ ಹರಿಯಲಿದೆ ಎಂದು ತಿಳಿಸಿದೆ.

Facebook Comments

comments