ತಾಯಿಯ ಸ್ವಂತ ಅಣ್ಣನ ಮಗನನ್ನು ಕತ್ತಿಯಿಂದ ಕಡಿದು ಭೀಕರ ಕೊಲೆ

ಮಂಗಳೂರು ಜುಲೈ 4: ತಾಯಿಯ ಸ್ವಂತ ಅಣ್ಣನ ಮಗನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಮಂಗಳೂರು ಹೊರವಲಯದ ತೊಕ್ಕೊಟ್ಟು ಚೆಂಬುಗುಡ್ಡೆ ಎಂಬಲ್ಲಿ ನಡೆದಿದೆ. ಕೊಲೆಗೆ ಕೌಟುಂಬಿಕ ಕಲಹ ಕಾರಣ ಎಂದು ಸಂಶಯಿಸಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ಮನೆಯ ಒಡತಿ ಲಲಿತಾ ಅವರ ಅಣ್ಣನ ಮಗ ನಾರಾಯಣ ಎಂದು ಗುರುತಿಸಲಾಗಿದೆ.

ಲಲಿತಾ ಅವರ ಮಗ ರಾಜೇಶ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಉಳ್ಳಾಲ ಪೊಲೀಸರು ಆರೋಪಿ ರಾಜೇಶನನ್ನು ವಶಕ್ಕೆ ಪಡೆದಿದ್ದಾರೆ.

ಲಲಿತಾ ಅವರ ಅಣ್ಣನ ಮಗ ನಾರಾಯಣ ಲಲಿತಾ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದ. ಅವರ ಎರಡನೆಯ ಮಗ ರಮೇಶ್ ಮೂಡುಬಿದಿರೆಯಲ್ಲಿ ವಾಸವಾಗಿದ್ದಾನೆ. ಆರೋಪಿ ರಾಜೇಶ್ ಗುಜರಾತ್ ನಲ್ಲಿ ಕೆಲಸ ಮಾಡುತ್ತಿದ್ದು ಪ್ರತಿ ಮೂರು ತಿಂಗಳಿಗೊಮ್ಮೆ ಬರುತ್ತಿದ್ದ. ಈ ಬಾರಿಯೂ ಊರಿಗೆ ಬಂದವರು ರಜಾ ಮೇಲೆ ಊರಿನಲ್ಲಿದ್ದ.

ನಾರಾಯಣ ಕೂಲಿ ಕೆಲಸ ಮಾಡುತ್ತಿದ್ದ. ಕೌಟುಂಬಿಕ ಕಲಹದಿಂದ ಮಾತಿನ ಚಕಮಕಿ‌ ನಡೆದು ಕೊಲೆ ನಡೆದಿರಬೇಕು ಎಂದು ಸಂಶಯಿಸಲಾಗಿದ್ದು ನಾರಾಯಣ ಅವರನ್ನು ರಾಜೇಶ್ ಕತ್ತಿಯಿಂದ ಭೀಕರವಾಗಿ ಕೊಲೆ ಮಾಡಿದ್ದಾನೆ ಬಳಿಕ ಕೊಲೆಗೆ ಬಳಸಿದ ಕತ್ತಿಯನ್ನು ತೊಳೆದು ಕೊಲೆಯಾದ ನಾರಾಯಣ ಕೈಯಲ್ಲಿ ಇಟ್ಟಿದ್ದಾನೆ.

ಆರೋಪಿ ಹಾಗೂ ಮೃತ ನಾರಾಯಣ ಇಬ್ಬರು ಮಾದಕ ವ್ಯಸನಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

11 Shares

Facebook Comments

comments