LATEST NEWS
ಇಟ್ ಕೊಚ್ಚಿ ಇಟ್ – ಜನಪ್ರಿಯ ಫುಡ್ ಬ್ಲಾಗರ್ ನೇಣು ಬಿಗಿದು ಆತ್ಮಹತ್ಯೆಗೆ ಶರಣು
ಕೇರಳ ನವೆಂಬರ್ 04: ಕೇರಳದ ಜನಪ್ರಿಯ ಫುಡ್ ಬ್ಲಾಗರ್ ರಾಹುಲ್ ಎನ್ ಕುಟ್ಟಿ ಕೊಚ್ಚಿಯಲ್ಲಿರುವ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಅವರಿಗೆ 33 ವರ್ಷ ವಯಸ್ಸಾಗಿತ್ತು. ರಾಹುಲ್ ಎನ್ ಕುಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ದಿ ಹೊಂದಿರುವ ಈಟ್ ಕೊಚ್ಚಿ ಈಟ್‌ನ ಸದಸ್ಯರಾಗಿದ್ದರು.
ಶುಕ್ರವಾರ-ಶನಿವಾರ ಬೆಳ್ಳಂಬೆಳಗ್ಗೆ ರಾಹುಲ್ ಶವವಾಗಿ ಪತ್ತೆಯಾಗಿರುವುದಾಗಿ ಕೊಚ್ಚಿಯ ಪಣಂಗಾಡ್ ಪೊಲೀಸರು ಖಚಿತಪಡಿಸಿದ್ದಾರೆ. ಶಿಷ್ಟಾಚಾರದ ಮೇರೆಗೆ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ.
ದಿ ನ್ಯೂಸ್ ಮಿನಿಟ್ ಪ್ರಕಾರ, ಶುಕ್ರವಾರ ರಾತ್ರಿ ಕೇರಳದ ಕೊಚ್ಚಿಯ ತ್ರಿಪುನಿಥುರಾ ಪ್ರದೇಶದಲ್ಲಿ ರಾಹುಲ್ ಎನ್ ಕುಟ್ಟಿ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಮ್ಮ ಪ್ರೀತಿಯ ರಾಹುಲ್ ಎನ್ ಕುಟ್ಟಿ ಅವರು ನಿಧನರಾಗಿದ್ದಾರೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ತುಂಬಾ ದುಃಖಿತರಾಗಿದ್ದೇವೆ” ಎಂದು ಈಟ್ ಕೊಚ್ಚಿ ಈಟ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಕುಟ್ಟಿ ಅವರು ಪತ್ನಿ ಮತ್ತು ಎರಡು ವರ್ಷದ ಮಗನನ್ನು ಅಗಲಿದ್ದಾರೆ.