Connect with us

LATEST NEWS

ಕೋಟ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಕುಂದಾಪುರ, ಡಿಸೆಂಬರ್ 17 : ಕುಂದಾಪುರದ ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿಯೊಂದು ಕೋಟ ಮೂರುಕೈ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಚಾಲಕ ಮತ್ತು ನಿರ್ವಾಹಕ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಲಾರಿ ಪಂಜಾಬ್ ನಿಂದ ಲ್ಯಾಮಿನೇಟೆಡ್ ಸನ್ ಮೈಕ್ ಶೀಟುಗಳನ್ನು ತುಂಬಿಕೊಂಡು ಮಂಗಳೂರಿಗೆ ಸಾಗುತ್ತಿತ್ತು ಎನ್ನಲಾಗಿದೆ. ಮೂರುಕೈ ಬಳಿ ಬರುವಾಗ ಲಾರಿಯ ಬ್ರೇಕ್ ವಿಫಲಗೊಂಡು ಈ ದುರಂತ ಸಂಭವಿಸಿದೆ.

ರಸ್ತೆಯಿಂದ ಬದಿಗೆ ಸರಿದ ಲಾರಿ ವಿದ್ಯುತ್ ಕಂಬ ಹಾಗೂ ತೆಂಗಿನಮರಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *