KARNATAKA
ಯುವಕರ ಡ್ರ್ಯಾಗ್ ರೇಸ್ ನ ಹುಚ್ಚಾಟ….ಅಮಾಯಕನ ಸಾವು ಬದುಕಿನ ನಡುವಿನ ಹೋರಾಟ

ಬೆಂಗಳೂರು: ಬೆಂಗಳೂರಿನ ಮೂಡಲಪಾಳ್ಯದಲ್ಲಿ ಕಳೆದ ಭಾನುವಾರ ರಾತ್ರಿ ನಡೆಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡ ಬೈಕ ಸವಾರ ಇನ್ನು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಮದ್ಯಪಾನ ಮತ್ತಿನಲ್ಲಿ ಯುವಕರು ಕಾರಿನಲ್ಲಿ ಡ್ರ್ಯಾಗ್ ರೇಸ್ ಮಾಡಿದ್ದೇ ಭಯಾನಕ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಬೆಚ್ಚಿಬೀಳಿಸುವಂತಿದೆ.
ಹಠಕ್ಕೆ ಬಿದ್ದವರಂತೆ ನಾ ಮುಂದೆ ತಾ ಮುಂದೆ ಎಂಬಂತೆ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಎದುರಿನ ರಾಯಲ್ ಎನ್ಫೀಲ್ಡ್ ಬೈಕ್ಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ರಭಸಕ್ಕೆ ಬೈಕ್ ಎರಡು ಪೀಸ್ ಆಗಿ, ಬೈಕ್ ಸವಾರ ಅಕ್ಷಯ್ (28) ಮೇಲಕ್ಕೆ ಹಾರಿಬಿದ್ದಿದ್ದ.

ಅಕ್ಷಯ್ ತೀವ್ರ ಗಾಯಗೊಂಡಿದ್ದು, ಸೊಂಟದಿಂದ ಮೇಲೆ ಸ್ವಾಧೀನ ಕಳೆದುಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.