LATEST NEWS
ಉಗ್ರಸಂಘಟನೆ ಪರ ಗೊಡೆ ಬರಹ ಮತ್ತೆ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ….!!
ಮಂಗಳೂರು ಡಿಸೆಂಬರ್ 5: ಮಂಗಳೂರು ನಗರದ ಅಪಾರ್ಟ್ ಮೆಂಟ್ ಗೊಡೆ ಒಂದರಲ್ಲಿ ಉಗ್ರ ಸಂಘಟನೆಪರ ಗೊಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಗುರುವಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಫುಡ್ ಡೆಲಿವರಿ ಮಾಡುತ್ತಿದ್ದ ಮಾಝ್ ಅಹ್ಮದ್ (21) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಆತ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಇನ್ನಿಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಒಟ್ಟು ಮೂವರನ್ನು ವಶಕ್ಕೆ ಪಡೆದಂತಾಗಿದೆ.
ನವೆಂಬರ್ 27ರಂದು ಸರ್ಕ್ಯೂಟ್ ಹೌಸ್‌ನಿಂದ ಬಿಜೈ ಕಡೆಗೆ ಹೋಗುವ ರಸ್ತೆಯಲ್ಲಿ ಕದ್ರಿ ಕಂಬಳ ಕ್ರಾಸ್‌ನಲ್ಲಿರುವ ಅಪಾರ್ಟ್‌ಮೆಂಟ್ ವೊಂದರ ಆವರಣ ಗೋಡೆಯಲ್ಲಿ ಹಾಗೂ 29ರಂದು ಮಂಗಳೂರು ನ್ಯಾಯಾಲಯ ಆವರಣದಲ್ಲಿರುವ ಪೊಲೀಸ್ ಹೊರ ಠಾಣೆಯ ಹಳೇ ಕಟ್ಟಡದ ಗೋಡೆಯಲ್ಲಿ ಉರ್ದು ಭಾಷೆಯಲ್ಲಿ ದೇಶದ್ರೋಹಿ ಬರಹ ಕಾಣಿಸಿಕೊಂಡಿತ್ತು. ಎರಡು ಪ್ರಕರಣಗಳಿಗೆ ಸಂಬಂಧಿಸಿ ಕದ್ರಿ ಹಾಗೂ ಬಂದರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ನಾಲ್ಕು ವಿಶೇಷ ಪೊಲೀಸ್ ತಂಡಗಳು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿವೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಗಳ ವಿಚಾರಣೆ ನಡೆಯುತ್ತಿದೆ.
Facebook Comments
You may like
-
ಕಾಟಿಪಳ್ಳ – ಬೈಕ್ ನಲ್ಲಿ ಬಂದು ಯುವಕನಿಗೆ ಚೂರಿ ಇರಿತ
-
ಜನವರಿ 30ರ ನಂತರ ಕಂಬಳ ಪ್ರಾರಂಭ – ಸಂಸದ ನಳಿನ್ ಕುಮಾರ್ ಕಟೀಲ್
-
ಸೆಕ್ಯುರಿಟಿಗಾರ್ಡ್ 6ನೇ ಮಹಡಿಯಿಂದ ಬಿದ್ದು ಮೃತ್ಯು
-
ಪರಿಸರ ಉಳಿಸುವಂತೆ ಹಸಿರು ದಳದಿಂದ ಆರಂಭವಾಗಿದೆ ಜಾಗೃತಿಯ ಆಗ್ರಹ…..
-
ಕಾಲೇಜು ವಿಧ್ಯಾರ್ಥಿನಿಗೆ ಅಮಲು ಪದಾರ್ಥ ಕುಡಿಸಿ ಅತ್ಯಾಚಾರ – ಆರೋಪಿ ಸೆರೆ
-
ಖಾಸಗಿ ಬಸ್ ಚಾಲಕನ ಕೊಲೆ ಯತ್ನ – ಆರೋಪಿ ಬೈಕ್ ಸವಾರ ಆರೆಸ್ಟ್
You must be logged in to post a comment Login