Connect with us

    KARNATAKA

    ಇ ಬ್ಯಾಟರಿಗಳನ್ನು ಲಿಫ್ಟ್ ನಲ್ಲಿ ಒಯ್ಯದಿರಿ ಜೋಕೆ..!! ಯಾಕಂತೀರಾ ಈ ಸ್ಟೋರಿ ನೋಡಿ..

    ಮುಂಬೈ : ಲಿಫ್ಟ್ ಒಂದರಲ್ಲಿ ದ್ವಿ ಚಕ್ರ ವಾಹನದ ಬ್ಯಾಟರಿಯನ್ನು ಚಾರ್ಚ್‌ ಮಾಡಲು ಕೊಂಡೊಯ್ಯುವಾಗ ಲಿಫ್ಟ್ ನೊಳಗೆ ಬ್ಯಾಟರಿ ಸ್ಪೋಟಗೊಳ್ಳುವ ಭಯಾನಕ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಬ್ಯಾಟರಿ ಚಾಲಿತ ಇ  ವಾಹನಗಳ ಸುರಕ್ಷತೆಯ ಬಗ್ಗೆ ಆನೇಕ ಪ್ರಶ್ನೆಗಳನ್ನು ಇದು ಹುಟ್ಟುಹಾಕಿದೆ.

    ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ  ಚೀನಾದಲ್ಲಿ ಎಲಿವೇಟರ್‌ನೊಳಗೆ ಇ-ಬೈಕ್ ಬ್ಯಾಟರಿ ಸ್ಫೋಟಗೊಂಡು ಒರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು ಸಿಸಿ ಟಿವಿಯಲ್ಲಿ ಸೆರೆಯಾದ ಬ್ಯಾಟರಿ ಸ್ಪೋಟದ ಭಯಾನಕ ದೃಶ್ಯಗಳು ಎದೆ ಝಲ್ ಎನಿಸುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ ಈ ಭೀಕರ ದೃಶ್ಯ ಗಮನಾರ್ಹ ಗಮನವನ್ನು ಸೆಳೆಯುತ್ತಿದೆ. ಮೂಲತಃ 2021 ರಲ್ಲಿ ದಾಖಲಿಸಲಾಗಿದ್ದ ಎನ್ನಲಾದ ಈ ಘಟನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು ಜನರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇ-ಬೈಕ್ ಬ್ಯಾಟರಿ ಹಿಡಿದಿದ್ದ ವ್ಯಕ್ತಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೀಡಿಯೊ ಬೇಕಾಬಿಟ್ಟಿ ಮಾರುಕಟ್ಟೆಗೆ ಬರುತ್ತಿರುವ ಇ-ಬೈಕ್ ಗಳ ಬ್ಯಾಟರಿಗಳ ಸುರಕ್ಷತೆಯ ಬಗ್ಗೆ ಆನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬ್ಯಾಟರಿಗಳನ್ನು ಆಗಾಗ ಪರಿಶೀಲಿಸಬೇಕಾಗುತ್ತೆ. ಬ್ಯಾಟರಿಯ ಹೊರ ಭಾಗ ಎಲ್ಲೋ ಒಂದೂಚು ಹಾನಿಯಾದ್ರೂ ಇಂತಹ ದುರ್ಘಟನೆಗಳು ನಡೆಯುತ್ತಿವೆ ಎನ್ನಲಾಗಿದೆ. ಲಿಫ್ಟ್‌  ಒಳಗೆ ತಂದ ಆ ಬ್ಯಾಟರಿ  ಲಿಫ್ಟ್ ಮುಚ್ಚಿದಾಗ, ಬ್ಯಾಟರಿಯ ಎಲೆಕ್ಟ್ರೋ-ಚಾರ್ಜ್ ಇಡೀ ಲಿಫ್ಟ್ ಅನ್ನು ಮ್ಯಾಗ್ನೆಟಿಕ್ ಬ್ಯಾಟರಿಯಾಗಿ ಪರಿವರ್ತಿಸುತ್ತದೆ. ಈ ಸಂದರ್ಭ ಬ್ಯಾಟರಿ ಸ್ಪೋಟಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.  ಬ್ಯಾಟರಿಗಳನ್ನು ಉತ್ಪಾದಿಸುವಾಗ ಕಟ್ಟುನಿಟ್ಟಾದ ನಿಯಮಗಳು ಮತ್ತು ಸುರಕ್ಷತಾ ಪರಿಶೀಲನೆಗಳು ಅಗತ್ಯವಾಗಿರಬೇಕೆಂದು ಈ ವಿಡಿಯೋ ಪ್ರತಿಪಾದಿಸುತ್ತಿದೆ. ಇ-ಬೈಕ್ ಬ್ಯಾಟರಿಗಳನ್ನು ನಿರ್ವಹಿಸುವಾಗ ಮತ್ತು ಚಾರ್ಜ್ ಮಾಡುವಾಗ ಎಚ್ಚರಿಕೆಯಿಂದ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲು ಅಧಿಕಾರಿಗಳು ಬಳಕೆದಾರರನ್ನು ಒತ್ತಾಯಿಸುತ್ತಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *