Connect with us

    LATEST NEWS

    ದಿನಕ್ಕೊಂದು ಕಥೆ- ಈತ

    ಈತ

    ಹಲೋ ನಮಸ್ಕಾರ .ನಾನು ಅಂದರೆ ನಿಮಗೆ ಸಿಟ್ಟು ,ಕೋಪ ,ಅಸಹ್ಯ ಹೀಗೆ ಏನೇನೋ ಭಾವನೆಗಳು ಉಕ್ಕಿ ಬರಬಹುದು .ಆದರೆ ನನಗೂ ಹೇಳಿಕೊಳ್ಳೋದು ಇರುತ್ತಲ್ವಾ?. ಆದರೆ ನನ್ನ ಮಾತನ್ನು ನೇರವಾಗಿ ಯಾರು ಕೇಳುತ್ತಾರೆ .ಅದಕ್ಕೆ ಈ ಕತೆ ಬರೆಯುತ್ತಾನಲ್ಲ ಅವನತ್ರ ಹೇಳಿದ್ದೇನೆ .ನನ್ನ ಮಾತನ್ನು ನೇರವಾಗಿ ಹೇಳುತ್ತಾನೆ ಆಗಬಹುದಾ!‌

    ” ನಾನು ಕಳ್ಳ, ಕದಿಯುವುದು ನನ್ನ ಬಿಸಿನೆಸ್. ಅದರಿಂದ ಬದುಕು ಸಾಗಿಸುತ್ತಿದ್ದೇನೆ. ದಯವಿಟ್ಟು ನನ್ನ ಮಾತು ಸ್ವಲ್ಪ ಕೇಳಿ. ನನ್ನನ್ನು ಕನ್ನಡಿಯಲ್ಲಿ ನಾನು ನೋಡಿಕೊಂಡದ್ದಕ್ಕಿಂತ ಹೆಚ್ಚು ನೀವು ಪೊಲೀಸ್ ಸ್ಟೇಷನ್ ಅಲ್ಲಿ ,ಪೇಪರ್ನಲ್ಲಿ ,ಟಿವಿಯಲ್ಲಿ ,ಗೋಡೆಗಳಲ್ಲಿ ಅಲ್ಲಲ್ಲಿ ಹಚ್ಚಿರುವುದನ್ನು ನೋಡಿರುತ್ತೀರಿ. ಈ ತರಹದ ಕಳ್ಳರಿದ್ದಾರೆ ಎಚ್ಚರಿಕೆ ,ಸಿಕ್ರೆ ಮಾಹಿತಿ ಸಿಗಲಿ ಅಂತ .ಹಾಗಾಗಿ ನಮಗೆ ಬೆಳಕಲ್ಲಿ ಓಡಾಡೋಕೆ ಕಷ್ಟ ಆಗಿ ಕತ್ತಲನ್ನಾರಿಸಿದ್ದೇನೆ.

    ನನ್ನ ಭಾವಚಿತ್ರ ಹಾಕಿರೋದು ನಾನು ಕಳ್ಳ ಅಂತ ಅಲ್ವಾ ,ಸರಿ ನನ್ನ ಬೇಡಿಕೆ ಏನೆಂದರೆ ನಿಮ್ಮಲ್ಲೂ! ಸಾರಿ! ಅಂದ್ರೆ ರಾಜಕಾರಣಿ, ಸರ್ಕಾರಿ ಅಧಿಕಾರಿಗಳೂ ಇರ್ತಾರಲ್ಲ ಅವರು ಸುಳ್ಳು ಹೇಳ್ತಾರೆ, ಮೋಸ ಮಾಡುತ್ತಾರೆ, ಬೆಳಗಿನ ಹೊತ್ತಲ್ಲಿ ಕೋಟಿ ಕೋಟಿ ನುಂಗುತ್ತಾರೆ .ಜೈಲಿಗೆ ಹೋಗ್ತಾರೆ ಕೆಲವರದು ಬಂಧನವೇ ಆಗುವುದಿಲ್ಲ .ಆದರೂ ಅವರು ಕಳ್ಳರು ಅನ್ನೋದು ಎಲ್ಲರಿಗೂ ಗೊತ್ತಿರುತ್ತದೆ ‌ಪತ್ರಿಕೆಗಳಲ್ಲೂ ಒಂದು ಸಲ ಬರುತ್ತೆ.

    ಅವರ ‘ಭಾವಚಿತ್ರಗಳನ್ನು ಅಲ್ಲಲ್ಲಿ ಹಾಕಿ ಇಂಥವರಿದ್ದಾರೆ ಎಚ್ಚರಿಕೆ ‘ ಅಂತ ಹಾಕಬಹುದಲ್ಲ!. ಅದರಿಂದ ಅಂಥವರ ಸಂಖ್ಯೆ ಕಡಿಮೆಯಾಗಬಹುದು ಜೊತೆಗೆ ನಮಗೆ ನಮ್ಮ ಕಡೆಯವರು ತುಂಬಾ ದೊಡ್ಡ ಮನುಷ್ಯರು ಇದ್ದಾರೆ ಅಂತ ನೆಮ್ಮದಿ ಸಿಗಬಹುದು.ಇದೊಂದು ಸಹಾಯ ಮಾಡಿ ಕೊಡಿ ಅಲ್ವಾ ?. ನನಗೀಗ ಸಮಯ ಆಯ್ತು ,ಕಾಯಕವೇ ಕೈಲಾಸ…. ಅಲ್ವಾ ಬರುತ್ತೇನೆ” . ಕತ್ತಲಲ್ಲಿ ಕರಗಿ ಹೋದ ಅವನು…ಆದರೆ ಅವನ ಮಾತಲ್ಲಾ…..

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply