Connect with us

    LATEST NEWS

    ಗರ್ಭಿಣಿಯರೂ ಕೊರೊನಾ ಲಸಿಕೆ ಪಡೆಯಬಹುದು – ಆರೋಗ್ಯ ಇಲಾಖೆ

    ನವದೆಹಲಿ ಜೂನ್ 26: ಗರ್ಭಿಣಿ ಮಹಿಳೆಯರಿಗೆ ಕೊರೊನಾ ಲಸಿಕೆ ನೀಡುವ ಕುರಿತಂತೆ ಇರುವ ಗೊಂದಲಗಳಿಗೆ ಕೇಂದ್ರ ಆರೋಗ್ಯ ಇಲಾಖೆ ತಿಲಾಂಜಲಿ ಇಟ್ಟಿದ್ದು, ಗರ್ಭಿಣಿ ಮಹಿಳೆಯರಿಗೆ ಅಗತ್ಯವಾಗಿ ಕೊರೊನಾ ಲಸಿಕೆ ನೀಡಬೆಕೆಂದು ತಿಳಿಸಿದೆ.
    ಗರ್ಭಿಣಿ (ಮತ್ತು ಮಗು) ಮಾರಣಾಂತಿಕ ಕೊರೊನಾ ವೈರಸ್‌ನ ಸೋಂಕಿಗೆ ಒಳಗಾಗುವ ಆತಂಕಗಳು ವ್ಯಕ್ತವಾಗುತ್ತಿರುವ ನಡುವೆಯೇ ಆರೋಗ್ಯ ಇಲಾಖೆ ಈ ನಿರ್ದೇಶ ನೀಡಿದ್ದು, ಗರ್ಭಿಣಿಯರಿಗೆ ಲಸಿಕೆ ನೀಡಬಹುದು ಎಂದು ಸರ್ಕಾರದ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.


    ಈ ಕುರಿತಂತೆ ಮಾಹಿತಿ ನೀಡಿರುವ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ.ಬಲರಾಮ್‌ ಭಾರ್ಗವ ಗರ್ಭಿಣಿಯರಿಗೆ ಲಸಿಕೆಯು ಉಪಯುಕ್ತವಾದದ್ದು. ಲಸಿಕೆಯನ್ನು ಅವರಿಗೆ ಅಗತ್ಯವಾಗಿ ನೀಡಬೇಕು ಎಂದಿದ್ದಾರೆ.
    ಇದಕ್ಕೂ ಹಿಂದೆ, ಗರ್ಭಿಣಿ, ಹಾಲುಣಿಸುವ ಮಹಿಳೆಯರು ಕೋವಿಡ್-19 ಲಸಿಕೆ ಪಡೆಯಬಾರದು ಎಂದು ಆರೋಗ್ಯ ಇಲಾಖೆ ಹೇಳಿತ್ತು. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಅವರು ಲಸಿಕೆ ಪಡೆಯುವುದು ಬೇಡ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಆರೋಗ್ಯ ಇಲಾಖೆಯು ತನ್ನ ನಿರ್ಧಾರವನ್ನು ಸದ್ಯ ಬದಲಾಯಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply