Connect with us

    LATEST NEWS

    ದಿನದ ಕಥೆ- ಕತೆಯೊಳಗೆ ಬಂದವ

    ಕತೆಯೊಳಗೆ ಬಂದವ

    ಟಿಕೆಟ್ ಟಿಕೆಟ್ ಬಸ್ಸಿನ ಕೊನೆಯಲ್ಲಿ ಕಂಡೆಕ್ಟರ್ ಕೂಗುತ್ತಿದ್ದ. ನಾನು ಸುಖಾಸೀನನಾಗಿದ್ದೆ. ಡ್ರೈವರ್ ಜೊತೆಯಾದ ಮಾತುಕತೆ ನನ್ನ ಗಮ್ಯ ತಲುಪುವವರೆಗೂ ನಡೆಯುತ್ತದೆ. ಇದು ನನ್ನ ದಿನಚರಿ. ಉದ್ಯಾವರದ ತಿರುವು ದಾಟಿದ ಕೂಡಲೇ ಎಡಬದಿಯ ಮಾರ್ಗ ಬದಿಯಲ್ಲಿ ಜೋಳ ಮಾರುತ್ತಾ ಆ ಹುಡುಗ ಕುಳಿತಿರುತ್ತಾನೆ. ಹಲವು ದಿನದಿಂದ ಗಮನಿಸಿದ್ದೇನೆ. ಅವನು ನನ್ನ ಕಥೆಯೊಳಗೆ ಪ್ರವೇಶಿಸಿಲ್ಲ.

    ಮಾತುಕತೆಗೆ ಸಮಯ ಸಿಕ್ಕಿಲ್ಲ, ಕಲ್ಪನೆಯಿಂದ ವಿವರಿಸೋಕೆ ಮನಸ್ಸಿಲ್ಲ. ಅಗತ್ಯವಿಲ್ಲದಿದ್ದರೂ ಆ ದಿನ ಜೋಳ ಖರೀದಿಸಿದೆ. ನನಗೆ ಮಾತುಕತೆ ಆಡಲೇಬೇಕಿತ್ತು .”ನಮಸ್ತೆ ಸಾರ್ ನಮ್ಮೂರು ಇದಲ್ಲ, ಉದ್ಯೋಗನಿಮಿತ್ತ ಈ ಊರನ್ನು ಆವರಿಸಿದ್ದೇವೆ. ಮಾರಾಟದಿಂದ ನಾಲ್ಕು ಕಾಸು ಸಿಗುತ್ತೆ. ನಮ್ಮ ಹೊಟ್ಟೆಗೆ ಸಾಕಾಗುತ್ತೆ.

    ಇವನಿಗೆ ಸ್ವಲ್ಪ ನಾಚಿಕೆ. ಆದರೆ ವ್ಯಾಪಾರ ಚೆನ್ನಾಗಿ ಮಾಡುತ್ತಾನೆ. ಇವನು ಸ್ವಲ್ಪ ಅಂಗಡಿ ನೋಡಿ ಕೊಳ್ಳುವುದರಿಂದ ನನಗೆ ಬೇರೆ ಕೆಲಸ ಮಾಡಕ್ಕೆ ಸಮಯ ಸಿಗುತ್ತೆ”.

    ಅವನಮ್ಮ ಮಾತಾಡಿದರು. “ಇದ್ಯಾಕೆ ಪುಸ್ತಕ?”. “ಅಣ್ಣ ಅದು ಈಗ ಕ್ಲಾಸ್ ಮೊಬೈಲ್ ಒಳಗೆ ಬರುತ್ತಲ್ವಾ ನನ್ನಲ್ಲಿ ಮೊಬೈಲ್ ಇಲ್ಲ, ಪಕ್ಕದ್ಮನೆ ರವಿ ಬರೀತಾನೆ ಅದನ್ನು ನೋಡಿ ನಾ ಬರಿಬಹುದಲ್ವಾ. ವಾರಕ್ಕೊಮ್ಮೆ ಸ್ಕೂಲ್ಗೆ ತೋರಿಸಬೇಕು “ಮುಗ್ದ ನಗು ಕಣ್ಣಲ್ಲಿತ್ತು. ಎರಡು ಜೋಳ ಪಡೆದು ಹೊರಟೆ.

    ಅವನಿಗೆ ಸೈನಿಕನಾಗಬೇಕು ಅಂತೆ, ನೋಟ್ ಪುಸ್ತಕದ ಕೊನೆಯ ಪುಟದಲ್ಲಿ ಯಾವುದೋ ಸೈನಿಕನ ಭಾವಚಿತ್ರವನ್ನು ತೋರಿಸಿದಾಗ ರೋಮಾಂಚನ ಆಗಿತ್ತು ನನಗೆ. ಈಗ ನಾನು ಬರುವ ಬಸ್ಸನ್ನು ಕಾಯ್ತಾನೆ. ನಂಗೆ ಟಾಟಾ ಮಾಡೋಕೆ .ನಂಗೆ ಆತ್ಮೀಯ ಸಿಕ್ಕನೋ ಅವನಿಗೆ ಪರಿಚಯಸ್ತ ಸಿಕ್ಕನೋ ಗೊತ್ತಿಲ್ಲ . ಒಟ್ಟಿನಲ್ಲಿ ಭೇಟಿಯಾಯಿತು, ಸಂಬಂಧ ಬೆಳೆಯಿತು. ಅದಕ್ಕಿಂತ ಮುಖ್ಯವಾದದ್ದು ಇನ್ನೇನಿದೆ ಅಲ್ವಾ ?.

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply