Connect with us

    DAKSHINA KANNADA

    ದಕ್ಷಿಣ ಕನ್ನಡದಲ್ಲಿ ಒಂದೇ ದಿನಕ್ಕೆ 996 ಮಂದಿಗೆ ಪಾಸಿಟಿವ್‌, 7 ಕಂಟೈನ್‌ಮೆಂಟ್‌ ವಲಯ ಘೋಷಣೆ

    ಮಂಗಳೂರು, ಮೇ 03: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 996 ಮಂದಿಗೆ ಕೋವಿಡ್‌ ಪಾಸಿಟಿವ್‌ ಬಂದಿದೆ. ಕೋವಿಡ್‌ ಕಾರಣದಿಂದ ಮಂಗಳೂರಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ಏಳು ಕಡೆಯಲ್ಲಿ ಒಂದೇ ದಿನದಲ್ಲಿ ಕಂಟೈನ್‌ಮೆಂಟ್‌ ವಲಯ ಘೋಷಣೆಯಾಗಿದೆ.ಜಿಲ್ಲೆಯಲ್ಲಿ ಕೊರೊನಾ ಗುಣಮುಖರಾಗಿ 413 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು. 7, 595 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 760 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

    ಬಂಟ್ವಾಳದ ಕಡೇಶಿವಾಲಯದ ರಥಬೀದಿಯ ಮನೆಯೊಂದರಲ್ಲಿ 11 ಪಾಸಿಟಿವ್‌ ಪ್ರಕರಣ, ಬಂಟ್ವಾಳ ಮೂಡದ ಕುಪಿಳದಲ್ಲಿ 10 ಪಾಸಿಟಿವ್‌, ಜಪ್ಪಿನಮೊಗರಿನ ವಾಸುಕಿನಗರದ ಮನೆಯಂದರಲ್ಲಿ 7 ಮಂದಿ ಪಾಸಿಟಿವ್‌, ಸುರತ್ಕಲ್‌ ಕಡಂಬೋಡಿಯ ವೃದ್ಧಾಶ್ರಮದಲ್ಲಿ8 ಮಂದಿಗೆ ಪಾಸಿಟಿವ್‌, ಧರ್ಮಸ್ಥಳದ ಬೋಳಿಯಾರ್‌ನ ಹತ್ತು ಮನೆಯ ವಠಾರದಲ್ಲಿ 17 ಮಂದಿ, ಧರ್ಮಸ್ಥಳದ ಪೊಸವಳಿಕೆಯಲ್ಲಿ 6 ಮಂದಿ, ಧರ್ಮಸ್ಥಳದ ಶಿಶಿಲ ತಾರೇಗುಡ್ಡೆಯಲ್ಲಿ 6 ಮಂದಿಗೆ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಕಂಟೈನ್‌ ಮೆಂಟ್‌ ವಲಯವನ್ನು ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ಕಂಟೈನ್‌ಮೆಂಟ್‌ ವಲಯ ಘೋಷಣೆಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply