Connect with us

LATEST NEWS

ಲಾಕ್ ಡೌನ್ ಸಂದರ್ಭದಲ್ಲಿ ಈಜಲು ಹೋದ 3 ಯುವಕರು ನೀರುಪಾಲು

ಉಡುಪಿ, ಮೇ 02: ಲಾಕ್ಡೌನ್ ರಜೆಯಲ್ಲಿ ಮೋಜು ಮಾಡಲು ಹೋಗಿ ಯುವಕರು ಜೀವ ಕಳಕೊಂಡ ಘಟನೆ ಶಿರ್ವದ ಪಾಂಬೂರು ಕಬೆಡಿ ಎಂಬಲ್ಲಿ ನಡೆದಿದೆ.

ಲಾಕ್ ಡೌನ್ ಸಂದರ್ಭದಲ್ಲಿ ನದಿಗೆ ಈಜಲು ಹೋದ ಮೂವರು ಯುವಕರು ನೀರಲ್ಲಿ ಮುಳುಗಿ ಸಾವನ್ನಪಿದ್ದು, ಮೃತಪಟ್ಟವರು ಶಂಕರಪುರ ಸುಭಾಸ್ ನಗರದ ನಿವಾಸಿಗಳಾದ ಕ್ಯಾಲ್ವಿನ್ ಕ್ಯಾಸ್ತಾಲಿನೊ(21),ಜಾಬೀರ್(18) ರಿಜ್ವಾನ್ (28) ಮೃತ ಯುವಕರು.

ಆಳವಾದ ಗುಂಡಿಗೆ ಈಜಲು ಹೋದ ಪರಿಣಾಮ ಈ ದುರ್ಘಟನೆ ನಡೆದಿರುವ ಸಾಧ್ಯತೆ ಇದೆ. ಶಿರ್ವ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

Video: