Connect with us

    LATEST NEWS

    ಸರಣಿ ರಜೆ ಉಡುಪಿ ದೇವಸ್ಥಾನ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ

    ಸರಣಿ ರಜೆ ಉಡುಪಿ ದೇವಸ್ಥಾನ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ

    ಉಡುಪಿ ಡಿಸೆಂಬರ್ 23: ಸರಣಿ ರಜೆ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ದೇವಸ್ಥಾನ ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ಕಂಡು ಬಂದಿದೆ. ಶನಿವಾರದಿಂದ ನಿರಂತರವಾಗಿ 3 ದಿನ ರಜೆ ಬಂದುದರಿಂದ ಪ್ರಸಿದ್ಧ ಪುಣ್ಯಕ್ಷೇತ್ರ ಉಡುಪಿ ಶ್ರೀಕೃಷ್ಣ ಮಠದಲ್ಲಿ ದರುಶನಕ್ಕಾಗಿ ಭಕ್ತ ಸಾಗರವೇ ಹರಿದು ಬಂದಿದೆ.

    ಮಾರುದ್ದದ ಸರದಿ ಸಾಲು:

    ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದುದರಿಂದ ಕ್ಷೇತ್ರದ ತುಂಬೆಲ್ಲಾ ಜನದಟ್ಟಣೆ ಕಂಡು ಬಂದಿತ್ತು. ಕೃಷ್ಣ ಮಠಕ್ಕೆ ಎಂದಿಗಿಂತ ಮೂರು ಪಟ್ಟು ಹೆಚ್ಚು ಪ್ರವಾಸಿಗರು ಬಂದಿದ್ದರಿಂದ, ಒಂದು ವಾರದಿಂದ ಪ್ರತಿದಿನ 20 ಸಾವಿರ ಜನ ಕೃಷ್ಣ ಮಠ ಭೇಟಿ ನೀಡುತ್ತಿದ್ದು, ನಗರದ ಲಾಡ್ಜ್ ಛತ್ರಗಳು ಫುಲ್ ಆಗಿದ್ದು , ಮಠದ ಎಲ್ಲಾ ಕಡೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಠದ ಎಲ್ಲಾ ಸಭಾಂಗಣದಲ್ಲೂ ಊಟದ ವ್ಯವಸ್ಥೆನ್ನು ಕಲ್ಪಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply