ಸರಕಾರಿ ಬಸ್ ಹಾಗೂ ಅಕ್ಟೀವಾ ನಡುವೆ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು
ಸರಕಾರಿ ಬಸ್ ಹಾಗೂ ಅಕ್ಟೀವಾ ನಡುವೆ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು
ಪುತ್ತೂರು, ಡಿಸೆಂಬರ್ 23: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಅಕ್ಟಿವಾ ಹೊಂಡಾ ನಡುವೆ ಪರಸ್ಪರ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಬೆದ್ರಾಳ ಸಮೀಪ ನಡೆದಿದೆ. ಮುಖಾಮುಖಿ ಸಂಭವಿಸಿದ ಈ ಅಫಘಾತದಿಂದ ಅಕ್ಟೀವಾ ಹೊಂಡಾದಲ್ಲಿದ್ದ ತಾಯಿ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಬೆದ್ರಾಳದ ರೈಲ್ವೇ ಸೇತುವೆ ಬಳಿ ಈ ದುರ್ಘಟನೆ ನಡೆದಿದ್ದು, ಬಸ್ ನ ಚಕ್ರ ಇಬ್ಬರ ಮೇಲೆ ಹಾದುಹೋದ ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ.
ಸಾವಿಗೀಡಾದ ನತದೃಷ್ಟರನ್ನು ಪುತ್ತೂರಿನ ವೀರಮಂಗಲದಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿರುವ ಕಮಲ (41) ಹಾಗೂ ಮಗಳು ಸೃಜನಾ (11) ಎಂದು ಗುರುತಿಸಲಾಗಿದೆ. ಕಮಲ ವೀರಮಂಗಲದ ಶ್ರೀರಾಮ ಎಂಬವರಿಗೆ ಸೇರಿದ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದರು. ತನ್ನ ಇಬ್ಬರು ಮಕ್ಕಳು ಮಂಗಳೂರಿನ ಹಾಸ್ಟೆಲ್ ನಲ್ಲಿ ತಂಗಿ ಕಲಿಯುತ್ತಿದ್ದು, ಸಣ್ಣ ಮಗಳು ಸೃಜನಾ ಳಿಗೆ ಕ್ರಿಸ್ಮಸ್ ರಜೆ ಹಿನ್ನಲೆಯಲ್ಲಿ ಪುತ್ತೂರಿಗೆ ಕರೆತಂದಿದ್ದರು. ಪುತ್ತೂರು ಸಂಚಾರಿ ಪೋಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.
You must be logged in to post a comment Login