Connect with us

    LATEST NEWS

    ಲವ್ ಬ್ರೆಕಪ್ ಮಾಡಿಕೊಂಡ ಯುವತಿಗೆ ಚಾಕು ಇರಿದ ಪ್ರೇಮಿ….!!

    ನವದೆಹಲಿ: ದೆಹಲಿಯಲ್ಲಿ ಇತ್ತೀಚೆಗೆ ಕ್ರೈಂ ರೆಟ್ ಹೆಚ್ಚಾಗಿದ್ದು, ಮೊನ್ನೆಯಷ್ಟೇ ಅಪಘಾತದಲ್ಲಿ ಯುವತಿ ಭೀಕರವಾಗಿ ಸಾವನಪ್ಪಿದ ಬೆನ್ನಲ್ಲೇ, ಸ್ನೇಹವನ್ನು ಕೊನೆಗೊಳಿಸಲು ಬಯಸಿದ ಯುವತಿಗೆ ಪಾಗಲ್ ಪ್ರೇಮಿ ಚಾಕುವಿನಿಂದ ಇರಿದ ಘಟನೆ ನಡೆದಿದೆ.


    ದೆಹಲಿಯ ಆದರ್ಶ ನಗರದಲ್ಲಿ ನಡೆದ ಘಟನೆ ನಡೆದಿದ್ದು, ಆರೋಪಿಯನ್ನು ಸುಖ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆತನನ್ನು ಪೊಲೀಸರು ಹರಿಯಾಣದ ಅಂಬಾಲಾದಲ್ಲಿ ಬಂಧಿಸಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ 22 ವರ್ಷದ ಯುವತಿಯನ್ನು ಪ್ರಸ್ತುತ ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ.

    ವರದಿಗಳ ಪ್ರಕಾರ ಯುವತಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು, ಆಕೆ 5 ವರ್ಷಗಳಿಂದ ಸುಖ್ವಿಂದರ್ ಜೊತೆ ಸ್ನೇಹ ಹೊಂದಿದ್ದಳು. ಆದರೆ ಜನವರಿ 2 ರಂದು ಇಬ್ಬರು ಜಗಳ ಮಾಡಿಕೊಂಡಿದ್ದು, ಆಕೆ ಸ್ನೇಹವನ್ನು ಕೊನೆಗೊಳಿಸುವುದಾಗಿ ತಿಳಿಸಿದ್ದಾಳೆ. ಇದಕ್ಕೆ ಕೋಪಗೊಂಡ ಸುಖ್ವಿಂದರ್ ಯುವತಿಗೆ 3-4 ಬಾರಿ ಚಾಕುವಿನಿಂದ ಇರಿಸಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply