Connect with us

KARNATAKA

ಶಾಸಕ ಸುನಿಲ್‌ ಕುಮಾರ್‌ ವಿರುದ್ಧ ಅವಹೇಳನಕಾರಿ ಸಂದೇಶ, ತಿಮರೋಡಿ ಅಭಿಮಾನಿ ಬಳಗ ವಾಟ್ಸಾಪ್ ಗ್ರೂಪ್ ಸದಸ್ಯನ ವಿರುದ್ದ ದೂರು..!

ಕಾರ್ಕಳ :  ಕಾರ್ಕಳ ಶಾಸಕ, ರಾಜ್ಯ ಬಿಜೆಪಿ ಘಟಕದ ಚುನಾವಣಾ ನಿರ್ವಹಣಾ ಸಂಚಾಲಕ ವಿ. ಸುನಿಲ್ ಕುಮಾರ್ ವಿರುದ್ಧ ಹಾಗೂ ಬಿಜೆಪಿ ಪಕ್ಷದ ವಿರುದ್ಧ ನಿಂದನಾರ್ಹ ಸಂದೇಶ ಹಾಕಿರುವ ವಾಟ್ಸಾಪ್ ಗ್ರೂಪಿನ ಸದಸ್ಯನ ವಿರುದ್ಧ  ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದೆ.

ಕಾರ್ಕಳ ಬಿಜೆಪಿ ಘಟಕ ಈ ದೂರು ದಾಖಲು ಮಾಡಿದ್ದು ಕ್ರಮಕ್ಕೆ ಆಗ್ರಹಿಸಿದೆ.  ಬಿಜೆಪಿ ಕಾರ್ಕಳ ಮಂಡಲದ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಅವರು ತಿಮರೋಡಿ ಅಭಿಮಾನಿ ಬಳಗ ಕಾರ್ಕಳ ಎಂಬ ಶೀರ್ಷಿಕೆಯ ವಾಟ್ಸಾಪ್ ಗ್ರೂಪ್ ಮತ್ತು ಈ ಗುಂಪಿನ ಒಬ್ಬ ಸದಸ್ಯನ ವಿರುದ್ಧ ಸೆಕ್ಷನ್ 469ರ ಅಡಿಯಲ್ಲಿ ದೂರು ದಾಖಲಿಸಿದ್ದು, ದೂರಿನಲ್ಲಿ ಬಿಜೆಪಿ ರಾಜ್ಯ ನಾಯಕ, ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಮತ್ತು ಪಕ್ಷದ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ನಿಂದನಾರ್ಹ, ಸುಳ್ಳು ಪ್ರಚೋದನಕಾರಿ ಸಂದೇಶವನ್ನು ಫಾವರ್ಡ್ ಮೂಲಕ ಹರಡಿಸಲಾಗಿದೆ. ಈ ವಾಟ್ಸಾಪ್ ಗ್ರೂಪ್ ಮತ್ತು ಸಂದೇಶ ರವಾನಿಸಿದ ಗುಂಪಿನ ಸದಸ್ಯನ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಅವರು ಆಗ್ರಹಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *