Connect with us

  LATEST NEWS

  ಕೇರಳ – ಟ್ರಕ್ ಗೆ ಬೇಕಂತ ಕಾರು ಗುದ್ದಿಸಿ ಶಿಕ್ಷಕಿಯ ಜೊತೆ ಸಾವನಪ್ಪಿದ ಆಕೆಯ ಸ್ನೇಹಿತ ಮೊಹಮ್ಮದ್ ಹಾಶಿಮ್

  ಅಡೂರ್ ಮಾರ್ಚ್ 31: ಎಝಂಕುಲಂನಲ್ಲಿ ಕಂಟೈನರ್ ಲಾರಿಗೆ ಕಾರು ಡಿಕ್ಕಿ ಹೊಡೆದು ಶಿಕ್ಷಕಿ ಹಾಗೂ ಆಕೆಯ ಸ್ನೇಹಿತೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಷ್ಟು ಮಾಹಿತಿಗಳು ಲಭ್ಯವಾಗಿದ್ದು, ಮೊದಲು ಅಪಘಾತ ಪ್ರಕರಣ ಎಂದು ನಂಬಿದ್ದ ಪೊಲೀಸರಿಗೆ ಇದೊಂದು ಉದ್ದೇಶಪೂರ್ವಕವಾಗಿ ಮಾಡಿದ ಅಪಘಾತ ಎಂದು ತಿಳಿದು ಬಂದಿದೆ.


  ಈ ಅಪಘಾತದಲ್ಲಿ ಶಾಲಾ ಶಿಕ್ಷಕಿ ಅನುಜಾ ರವೀಂದ್ರನ್ (37) ಹಾಗೂ ಆಕೆಯ ಸ್ನೇಹಿತ ಮೊಹಮ್ಮದ್ ಹಾಶಿಮ್ ಸಾವನಪ್ಪಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಹಾಶಿಮ್ ಮತ್ತು ಅನುಜಾ ಇಬ್ಬರೂ ಅನ್ಯೋನ್ಯವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
  ತುಂಬಮನ್ ಉತ್ತರ ಸರ್ಕಾರಿ ಜಿಎಚ್‌ಎಸ್‌ನ ಶಿಕ್ಷಕಿ ಅನುಜಾ ಅವರು ಇತರ ಅಧ್ಯಾಪಕರೊಂದಿಗೆ ಶಾಲಾ ವಿಹಾರಕ್ಕೆಂದು ಹಿಂದಿರುಗುತ್ತಿದ್ದಾಗ ಹಾಶಿಮ್ ಶಾಲಾ ವಾಹನವನ್ನು ತಡೆದು ಬಲವಂತವಾಗಿ ಅನುಜಾ ಅವರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ ಈ ವೇಳೆ ಅವನ ಕಾರಿನಲ್ಲಿ ಅವನೊಂದಿಗೆ ಹೊರಡುವ ಮೊದಲು ಅನುಜಾ ಹಾಶಿಮ್ ಅನ್ನು ಇತರ ಶಿಕ್ಷಕರಿಗೆ ತನ್ನ ಸಂಬಂಧಿ ವಿಷ್ಣು ಎಂದು ಪರಿಚಯಿಸಿದ್ದಾಳೆ.

  ಸ್ವಲ್ಪ ಸಮಯದ ಬಳಿಕ ತನ್ನ ಸಹೋದ್ಯೋಗಿಯೊಬ್ಬರಿಗೆ ಕರೆ ಮಾಡಿರುವ ಅನುಜಾ ಅಳುತ್ತಾ ತಾನು ಸಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಅನುಜಾ ಅವರ ಮನೆಗೆ ಕರೆ ಮಾಡಿ ತಂದೆ ಹಾಗೂ ಪತಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ ಅನುಜಾಗೆ ವಿಷ್ಣು ಎಂಬ ಸಂಬಂಧಿ ಇಲ್ಲ ಎಂದು ತಿಳಿದು ಬಂದಿತ್ತು. ಆಕೆಯ ಸಹೋದ್ಯೋಗಿಗಳು ಮತ್ತೆ ಕರೆ ಮಾಡಿದಾಗ ಅನುಜಾ ಕರೆ ಸ್ವೀಕರಿಸಿ ತಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿದರು. ನಂತರ ಶಿಕ್ಷಕರು ಆದೂರು ಠಾಣೆಗೆ ತೆರಳಿ ದೂರು ನೀಡಿದ್ದಾರೆ.ಈ ನಡುವೆ ಅನುಜಾ ಅವರ ತಂದೆ ಮತ್ತು ಸಹೋದರ ಪೊಲೀಸ್ ಠಾಣೆಗೆ ಬಂದಿದ್ದಾರೆ. ಸ ಕೆಲ ಸಮಯದ ನಂತರ ಹಾಶೀಂ ಚಲಾಯಿಸುತ್ತಿದ್ದ ಕಾರು ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

  ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೆರವಿನಿಂದ ಕಾರನ್ನು ತುಂಡಾಗಿ ತುಂಡರಿಸಿ ಅನುಜಾ ಮತ್ತು ಹಾಶಿಮ್ ಇಬ್ಬರನ್ನೂ ಹೊರತೆಗೆಯಲಾಯಿತು. ಅನುಜಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಶಿಮ್ ಅವರನ್ನು ಆದೂರು ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಹಾಶಿಮ್ ಜೊತೆ ಅನುಜಾಳ ಸಂಬಂಧ ಮನೆಯವರಿಗೆ ಗೊತ್ತಿರಲಿಲ್ಲ. ಹಾಶಿಮ್ ಮೂರು ವರ್ಷಗಳಿಂದ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ.
  ಪೊಲೀಸರ ಪ್ರಕಾರ ಹಾಶೀಮ್ ಉದ್ದೇಶಪೂರ್ವಕವಾಗಿಯೇ ವೇಗದಿಂದ ಕಾರನ್ನು ಟ್ರಕ್ ಗೆ ಗುದ್ದಿದ್ದಾನೆ. ಇದರಿಂದಾಗಿ ಇಬ್ಬರೂ ಸಾವನಪ್ಪಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply