Connect with us

    LATEST NEWS

    ಉಡುಪಿ – ನಾಪತ್ತೆಯಾಗಿದ್ದ ಆಟೋ ಚಾಲಕ ಮುಹಮ್ಮದ್ ಫೈಝಲ್ ಮೃತದೇಹ ಪತ್ತೆ

    ಉಡುಪಿ ಮಾರ್ಚ್ 31: ನಾಪತ್ತೆಯಾಗಿದ್ದ ಆಟೋರಿಕ್ಷಾ ಚಾಲಕ ಮಹಮ್ಮದ್ ಫೈಝಲ್ ಮೃತದೇಹ ಬ್ರಹ್ಮಾವರ ಉಪ್ಪೂರು ಮಾಯಾಡಿ ಎಂಬಲ್ಲಿರುವ ಸ್ವರ್ಣಾ ನದಿಯಲ್ಲಿ ಪತ್ತೆಯಾಗಿದೆ.


    ಮೂಡು ತೋನ್ಸೆ ಗ್ರಾಮದ ಮುಹಮ್ಮದ್ ಫೈಝಲ್(36) ಎಂಬುವವರು ಮಾರ್ಚ್ 27ರಂದು ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಮನೆಯಿಂದ ಹೊರಟವರು ಬಳಿಕ ನಾಪತ್ತೆಯಾಗಿದ್ದರು. ನಂತರ ಅವರಿಗಾಗಿ ಹುಡುಕಾಟ ನಡೆಸಿದಾಗ ಮನೆ ಬಳಿಯ ಮೈದಾನದ ಸಮೀಪ ಪತ್ತೆಯಾಗಿತ್ತು. ಬಳಿಕ ಮುಹಮ್ಮದ್ ಫೈಝಲ್ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಬಳಿಕ ಮುಹಮ್ಮದ್ ಫೈಝಲ್ ಅವರ ಮೃತದೇಹವು ಸ್ವರ್ಣಾ ನದಿಯಲ್ಲಿ ಪತ್ತೆಯಾಗಿದೆ. ಇನ್ನು ಅವರ ಸಾವಿನ ಕುರಿತು ಹಲವಾರು ಸಂಶಯವಿರುವುದಾಗಿ ನೀಡಿರುವ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply