LATEST NEWS
ಗಂಗೊಳ್ಳಿ -ಸೆಲ್ಫಿ ತೆಗೆಯುವಾಗ ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ….!!
ಗಂಗೊಳ್ಳಿ ಜುಲೈ 19: ತ್ರಾಸಿ ಸಮುದ್ರ ತೀರದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಸಮುದ್ರ ಅಲೆಯ ಅಬ್ಬರಕ್ಕೆ ಸಿಲುಕಿ ನೀರುಪಾಲಾಗಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದೆ.
ಮೂಲತಃ ಗದಗದ ಪ್ರಸಕ್ತ ಕಾಪುವಿನಲ್ಲಿ ಗಾರೆ ಕೆಲಸ ಮಾಡಿಕೊಂಡಿರುವ ಪೀರ್ ಸಾಬ್(21) ಮೃತಪಟ್ಟವರು. ಅವರು ಮಂಗಳವಾರ ತ್ರಾಸಿ ಸಮುದ್ರ ತೀರದಲ್ಲಿ ಸೆಲ್ಪಿ ಪೋಟೋಗೆ ತೆಗೆದುಕೊಳ್ಳುವಾದ ಸಮುದ್ರದ ಅಲೆ ಅಪ್ಪಳಿಸಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ. ಮೃತದೇಹಕ್ಕಾಗಿ ಮಂಗಳವಾರ ತಡರಾತ್ರಿ ತನಕ ಹುಡುಕಾಟ ನಡೆದಿತ್ತು. ಗಂಗೊಳ್ಳಿ ಪೊಲೀಸರು, ಅಗ್ನಿಶಾಮಕ ದಳ, ಗಂಗೊಳ್ಳಿ 24×7 ಆಪತ್ಬಾಂಧವ ಆ್ಯಂಬುಲೆನ್ಸ್ ಕಾರ್ಯಕರ್ತರು ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವರ ಮೃತದೇಹ ಇಂದು ಗುಜ್ಜಾಡಿ ಗ್ರಾಮದ ಸನ್ಯಾಸಿಬಲೆ ಎಂಬಲ್ಲಿ ಪತ್ತೆಯಾಗಿದ್ದು, ಪ್ರದೇಶ ಘಟನೆ ನಡೆದ ತ್ರಾಸಿಯಿಂದ 2 ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ
You must be logged in to post a comment Login