Connect with us

    KARNATAKA

    ದಾವಣಗರೆ : ಕಂಡ ಕಂಡವರ ಮೇಲೆ ದಾಳಿ ಮಾಡುತ್ತಿದ್ದ ರೌಡಿ ಕೋತಿ ಅರೆಸ್ಟ್..!

    ದಾವಣಗೆರೆ ಜಿಲ್ಲೆಯ ಮೆಲೇಬೆನ್ನೂರು ಪಟ್ಟಣದಲ್ಲಿ ಕಂಡ ಕಂಡವರ ಮೇಲೆ ದಾಳಿ ಮಾಡುತ್ತಿದ್ದ ಕರಿ ಮೂತಿ ಕೋತಿ ಯನ್ನು ಕೊನೆಗೂ ಸೆರೆ ಹಿಡಿದಿದ್ದಾರೆ.

    ದಾವಣಗೆರೆ :ದಾವಣಗೆರೆ ಜಿಲ್ಲೆಯ ಮೆಲೇಬೆನ್ನೂರು ಪಟ್ಟಣದಲ್ಲಿ ಕಂಡ ಕಂಡವರ ಮೇಲೆ ದಾಳಿ ಮಾಡುತ್ತಿದ್ದ ಕರಿ ಮೂತಿ ಕೋತಿ ಯನ್ನು ಕೊನೆಗೂ ಸೆರೆ ಹಿಡಿದಿದ್ದಾರೆ.

    ಕಳೆದ ನಾಲ್ಕು ದಿನಗಳಲ್ಲಿ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದ ಕರಿ ಕೋತಿಯಿಂದ ಜನ ಭಯಭೀತರಾಗಿದ್ದರು.

    ಗುರುವಾರ ಒಂದೆ ದಿನ 9 ಜನರ ಮೇಲೆ ಕೋತಿ ದಾಳಿ ಮಾಡಿ ಗಾಯಗೊಳಿಸಿದ್ದ, ಈ ರೌಡಿ ಕೋತಿಯನ್ನು ಹಿಡಿದು ಜನರನ್ನು ರಕ್ಷಣೆ ಮಾಡಬೇಕೆಂದು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

    ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಬೋನ್ ಇಡಲಾಗಿತ್ತು.

    ಬೋನುನಲ್ಲಿಟ್ಟ ಮೆಕ್ಕೆಜೋಳ ತಿನ್ನಲು ಬಂದ ರೌಡಿ ಕೋತಿ ಕೊನೆಗೂ ಸೆರೆಯಾಗಿದ್ದಾನೆ, ಇದರಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply