Connect with us

FILM

ಅಂಬರೀಷ್ ಪ್ಯಾಮಿಲಿಯಿಂದ ಅಂತರ ಕಾಯ್ದುಕೊಂಡ ಡಿಬಾಸ್ ದರ್ಶನ್ – ಸುಮಲತಾ ತಿರುಗೇಟು…!!

ಬೆಂಗಳೂರು ಮಾರ್ಚ್ 12: ಸುಮಲತಾ ಅಂಬರೀಷ್ ಅವರ ಜೊಡೆತ್ತು ಎಂದು ಕರೆಸಿಕೊಳ್ಳುತ್ತಿದ್ದ ದರ್ಶನ ಮತ್ತು ಯಶ್ ನಡುವೆ ಇದೀಗ ದರ್ಶ ಅಂಬರೀಶ್ ಪ್ಯಾಮಿಲಿಯಿಂದ ಅಂತರ ಕಾಯ್ದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ಅಂಬರೀಷ್ ಸೇರಿದಂತೆ ಅಭಿಷೇಕ್ ಅಂಬರೀಷ್, ಅಭಿ ಪತ್ನಿ ಅವಿವಾ, ಪುತ್ರ ವಿನೀಶ್ ಅವರನ್ನು ಅನ್ ಪಾಲೋ ಮಾಡಿದ್ದಾರೆ. ಇದರೊಂದಿಗೆ ಸುಮಲತಾ ಹಾಗೂ ದರ್ಶನ ನಡುವಿನ ಭಾಂಧವ್ಯದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗಿದೆ.

ಸುಮಲತಾ ಅಂಬರೀಷ್ ಹಾಗೂ ದರ್ಶನ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ದರ್ಶನ್​ನ ಮಗ ಎಂದು ಸುಮಲತಾ ಪರಿಗಣಿಸಿದ್ದರು. ದರ್ಶನ್ ಜೈಲಿಗೆ ಹೋದಾಗ ಮೌನ ಕಾಯ್ದುಕೊಂಡಿದ್ದ ಸುಮಲತಾ, ದರ್ಶನ್ ಅವರು ಹೊರ ಬರುತ್ತಿದ್ದಂತೆ ‘ಅವನು ಯಾವಾಗಲೂ ನನ್ನ ಮಗ’ ಎಂದಿದ್ದರು. ಈಗ ಡೆವಿಲ್ ಚಿತ್ರೀಕರಣ ಶುರುವಾಗುವ ಹೊತ್ತಿನಲ್ಲೇ ಆಪ್ತರಿಗೆ ಇನ್‌ಸ್ಟಾದಿಂದ ದರ್ಶನ್‌ ಕೊಕ್‌ ಕೊಟ್ಟಿದ್ದಾರೆ.
ನಟ ದರ್ಶನ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಇಷ್ಟು ದಿನ ಕೆಲವೇ ಕೆಲವರನ್ನು ಫಾಲೋ ಮಾಡುತ್ತಾ ಇದ್ದರು. ಆ ಪೈಕಿ ಸುಮಲತಾ, ಅಭಿಷೇಕ್ ಅಂಬರೀಷ್, ಅಭಿ ಪತ್ನಿ ಅವಿವಾ, ಪುತ್ರ ವಿನೀಶ್, ಡಿ ಕಂಪನಿ ಇದ್ದವು. ಆದರೆ, ಈಗ ಅವರು ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ. ಅವರು ಯಾರನ್ನು ಫಾಲೋ ಮಾಡದೇ ಇರೋದು ಹಲವು ಪ್ರಶ್ನೆ ಹುಟ್ಟಿ ಹಾಕಿದೆ .


ದರ್ಶನ್ ಅನ್​ಫಾಲೋ ಮಾಡಿದ ವಿಚಾರ ಚರ್ಚೆ ಹುಟ್ಟುಹಾಕಿದ ಬೆನ್ನಲ್ಲೇ ಸುಮಲತಾ ಅವರು ಮಾರ್ಮಿಕವಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇಂಗ್ಲಿಷ್ ಲೈನ್​ಗಳನ್ನು ಅವರು ಇನ್​ಸ್ಟಾಗ್ರಾಮ್​ ಸ್ಟೇಟಸ್​ಗೆ ಪೋಸ್ಟ್ ಮಾಡಿದ್ದಾರೆ. ಅತ್ಯುತ್ತಮ ನಟ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತದೆ ಎಂದರೆ.. ಯಾರು ಸತ್ಯವನ್ನ ತಿರುಚುತ್ತಾರೆ, ಪಶ್ಚಾತಾಪ ಇಲ್ಲದೆ ಬೇರೆಯವರಿಗೆ ನೋವು ಮಾಡುತ್ತಾರೆ, ತಪ್ಪನ್ನು ಬೇರೆಯವರ ಮೇಲೆ ಹಾಕುತ್ತಾರೆ. ಆದಾಗ್ಯೂ ಅವರು ತಮ್ಮನ್ನು ತಾವು ಹೀರೋ ಎಂದುಕೊಳ್ಳುತ್ತಾರೆ’ ಎಂದು ಸುಮಲತಾ ಬರೆದುಕೊಂಡಿದ್ದಾರೆ.

Share Information
Continue Reading
Advertisement
2 Comments

2 Comments

    Leave a Reply

    Your email address will not be published. Required fields are marked *