LATEST NEWS
ಕರಾವಳಿಗೆ ಅಪ್ಪಳಿಸಲಿದೆಯೇ ಸಾಗರ್ ಚಂಡಮಾರುತ
ಕರಾವಳಿಗೆ ಅಪ್ಪಳಿಸಲಿದೆಯೇ ಸಾಗರ್ ಚಂಡಮಾರುತ
ಮಂಗಳೂರು ಮೇ 18: ಮುಂದಿನ 24 ಗಂಟೆಗಳಲ್ಲಿ ದೇಶದ ಕರಾವಳಿ ಭಾಗಕ್ಕೆ ಸಾಗರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಮಾನಾ ಇಲಾಖೆ ಮುನ್ಸೂಚನೆ ನೀಡಿದೆ. ಸಾಗರ್ ಚಂಡ ಮಾರುತದ ಪರಿಣಾಮ ಸಮುದ್ರದಲ್ಲಿ ಭಾರಿ ಅಲೆಗಳು ಏಳುವ ಕಾರಣ ಮೀನುಗಾರಿಕೆ ತೆರಳದಂತೆ ಇಲಾಖೆ ಎಚ್ಚರಿಕೆ ನೀಡಿದೆ.
ಅಡೆನ್ ಕೊಲ್ಲಿಯಲ್ಲಿ ಕೇಂದ್ರಿಕೃತವಾಗಿರುವ ಸಾಗರ್ ಚಂಡಮಾರುತದ ಕುರಿತಂತೆ ದಕ್ಷಿಣದ ರಾಜ್ಯಗಳು ಹಾಗೂ ಲಕ್ಷದ್ವೀಪದ ಜನತೆಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಇಂದು ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪ ದ್ವೀಪಸಮೂಹಗಳಿಗೆ ‘ಸಾಗರ್’ ಚಂಡಮಾರುತ ಅಪ್ಪಳಿಸುವ ಸಾದ್ಯತೆ ಕುರಿತಂತೆ ಎಚ್ಚರಿಕೆ ನೀಡಿದೆ.
ಸಧ್ಯ ಅಡೆನ್ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿರುವ ಚಂಡಮಾರುತವು ಮಾರು 390 ಕಿಮೀ ಪೂರ್ವಕ್ಕೆಯೆಮನ್ ನ ಏಡೆನ್ ನಗರದ ಈಶಾನ್ಯ ಮತ್ತು 560 ಕಿಮೀ ಸೊಕೊಟ್ರಾ ದ್ವೀಪಗಳ ಗಡಿ ಭಾಗದಲ್ಲಿ ನೆಲೆಯಾಗಿದೆ.
ಮುಂದಿನ 12 ಗಂಟೆಗಳಲ್ಲಿ ಇದು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದ್ದು ಮುಂದಿನ 48 ಗಂಟೆಗಳಲ್ಲಿ ಪಶ್ಚಿಮ ಕೇಂದ್ರ ಭಾಗ, ನೈರುತ್ಯ ಅರೇಬಿಯನ್ ಸಮುದ್ರದಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಬಾರದೆಂದು ಇಲಾಖೆ ಎಚ್ಚರಿಸಿದೆ.
ಮುಂದಿನ 24 ಗಂಟೆಗಳಲ್ಲಿ ದೇಶದ ಕರಾವಳಿ ಭಾಗಗಳಿಗೆ ಚಂಡಮಾರುತ ಅಪ್ಪಳಿಸುವ ಅಪಾಯವಿದೆ ಎಂದ ಇಲಾಖೆ ಚಂಡಮಾರುತದ ಕಾರಣ ಸಮುದ್ರದಲ್ಲಿ ದೊಡ್ಡ ಪ್ರಮಾಣದ ಅಲೆಗಳೇಳುವ ಸಾಧ್ಯತೆ ಇದೆ ಎಂದಿದೆ