LATEST NEWS
ಕ್ರಿಕೆಟ್ ವರ್ಲ್ಡ್ ಕಪ್ – ಮೂಡಬಿದಿರೆಯಲ್ಲಿ ಭರ್ಜರಿ ಬೆಟ್ಟಿಂಗ್ ದಂಧೆ – 5 ಮಂದಿ ಅರೆಸ್ಟ್
ಮಂಗಳೂರು ಅಕ್ಟೋಬರ್ 16: ಕ್ರಿಕೆಟ್ ವಿಶ್ವಕಪ್ ಮ್ಯಾಚ್ ಗಳು ನಡೆಯುತ್ತಿದ್ದರೆ ಮಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಚ್ಚಾಗಿ ನಡೆಯುತ್ತಿದ್ದು, ಇದೀಗ ಪೊಲೀಸರು ಬೆಟ್ಟಿಂಗ್ ದಂಧೆಯ ಬುಡಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಸತತ ಕಾರ್ಯಾಚರಣೆ ನಡೆಸುತ್ತಿರುವ ಮಂಗಳೂರು ಪೊಲೀಸರು ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿರುವವರನ್ನು ಕಂಬಿ ಹಿಂದೆ ನಿಲ್ಲಿಸುತ್ತಿದ್ದಾರೆ. ಇಂದು ಎರಡು ಪ್ರತ್ಯೇಕ ಪ್ರಕರಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತರಾಗಿರುವ ಐವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೊದಲ ಪ್ರಕರಣದಲ್ಲಿ ಮೂಡಬಿದರೆಯ ಮಾರ್ಪಾಡಿ ಗ್ರಾಮದ ಅಲಂಗಾರು ಎಂಬಲ್ಲಿರುವ ಎಸ್.ಐ ಸ್ಪೋರ್ಟ್ಸ್ ಅಂಗಡಿಯ ಮುಂಭಾಗದಲ್ಲಿ ನವೀದ್ ಎಂಬಾತನು ಪ್ರಸಾದ್ ಮತ್ತು ಉಮೇಶ್ ಎಂಬುವರಿಂದ ಹಣವನ್ನು ಪಡೆದು Comfort Zone 247 ಎಂಬ ಮೋಬೈಲ್ ವೆಬ್ ಸೈಟ್ ನಲ್ಲಿ ಕ್ರಿಕೇಟ್ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ನವೀದ್ ಎಂಬಾತನನ್ನು ಹಿಡಿದು ವಿಚಾರಿಸಿದಾಗ ಈ ದಿನ ನಡೆಯುತ್ತಿದ್ದ ಶ್ರೀಲಂಕ ಮತ್ತು ಆಸ್ಪ್ರೇಲಿಯಾ ಕ್ರಿಕೆಟ್ ಮ್ಯಾಚ್ ನಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಿದ್ದಾಗಿ ತಿಳಿಸಿದ್ದಾನೆ. ಬಂಧಿತ ಆರೋಪಿಗಳನ್ನು ಮೂಡಬಿದಿರೆ ನವೀದ್(30), ಉಮೇಶ್ (40), ಪ್ರಸಾದ್ ದೇವಾಡಿಗ(35) ಎಂದು ಗುರುತಿಸಲಾಗಿದೆ.
ಮತ್ತೊಂದು ಪ್ರಕರಣ ಮೂಡಬಿದರೆಯ ಮಾರ್ಪಾಡಿ ಗ್ರಾಮದ ಒಂಟಿಕಟ್ಟೆ ಎಂಬಲ್ಲಿರುವ ಕಡಲಕೆರೆ ಪಾರ್ಕ್ ನಲ್ಲಿ ಸುಖೇಶ್ ಆಚಾರ್ಯ ಎಂಬಾತನು ಪುರಂದರ್ ಎಂಬಾತನಿಂದ ಹಣವನ್ನು ಪಡೆದು allpaanel.com/m/home ಎಂಬ ಮೋಬೈಲ್ ವೆಬ್ ಸೈಟ್ ನಲ್ಲಿ ಕ್ರಿಕೇಟ್ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಸುಖೇಶ್ ಆಚಾರ್ಯ ಎಂಬಾತನನ್ನು ಹಿಡಿದು ವಿಚಾರಣೆ ನಡೆಸಿದಾಗ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವುದಾಗಿ ತಿಳಿಸಿದ್ದಾನೆ. ಬಂಧಿತರ ಆರೋಪಿಗಳನ್ನು ಮೂಡಬಿದಿರೆ ನಿವಾಸಿಗಳಾಗಿ ಸುಖೇಶ್ ಆಚಾರ್ಯ ಮತ್ತು ಪುರಂದರ ಕುಲಾಲ್ ಎಂದು ಗುರುತಿಸಲಾಗಿದೆ.
ಎರಡೂ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.