Connect with us

    LATEST NEWS

    ಕೋಡಿ ಕನ್ಯಾಣ – ಮೂರು ಬೈಕ್ ಗಳ ನಡುವೆ ಭೀಕರ ಅಪಘಾತಕ್ಕೆ ಬಲಿಯಾದ ರವಿ

    ಕೋಟ ಅಕ್ಟೋಬರ್ 16: ಮೂರು ಬೈಕ್ ಗಳ ನಡುವೆ ನಡೆದ ಭೀಕರ ಅಪಘಾತಕ್ಕೆ ಓರ್ವ ಯುವಕ ಸಾವನಪ್ಪಿದ ಘಟನೆ ಕೋಡಿ ಕನ್ಯಾಣದ ಕನ್ಯಾಣ ಅಂಗನವಾಡಿ ಸಮೀಪ ಅಕ್ಟೋಬರ್ 15 ಭಾನುವಾರ ರಾತ್ರಿ ನಡೆದಿದೆ. ಮೃತ ಯುವಕನನ್ನು ಪಾರಂಪಳ್ಳಿಯ ರವಿಯಾನೆ ರವೀಂದ್ರ ಪೂಜಾರಿ(30) ಎಂದು ಗುರುತಿಸಲಾಗಿದೆ.


    ಕೋಡಿ ಕನ್ಯಾಣದಿಂದ ಪಾರಂಪಳ್ಳಿಗೆ ಹೋಗುತ್ತಿದ್ದ ಎರಡು ಬೈಕ್ ಗಳು ಪಾರಂಪಳ್ಳಿಯಿಂದ ಬರುತ್ತಿದ್ದ ಬೈಕ್ ಗೆ ಮುಖಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತ ನಡೆದ ಸ್ಥಳದ ವಿರುದ್ದ ದಿಕ್ಕಿನಲ್ಲಿ ಯಾವುದೇ ಪಾರ್ಕಿಂಗ್ ಸಿಗ್ನಲ್ ಇಲ್ಲದೆ ರಸ್ತೆ ಬದಿಯಲ್ಲಿ ಕಾರೊಂದು ಪಾರ್ಕಿಂಗ್ ಮಾಡಿದ್ದು ಬೈಕ್ ಸವಾರರಿಗೆ ಮುಂದೆ ಬರುತ್ತಿದ್ದ ಬೈಕ್ ಕಾಣಿಸದೆ ಇರುವುದರಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಅಪಘಾತದ ತೀವ್ರತೆಯು ಬೈಕ್ ಮುಖಮುಖಿ ಡಿಕ್ಕಿಯಾಗಿ ನಿಂತ ಕಾರಿಗೆ ಅಪ್ಪಳಿಸಿ ಬೈಕ್ ಸವಾರರು ಗಂಭೀರ ಗಾಯಗೊಂಡಿರುತ್ತಾರೆ. ಗಂಭೀರ ಗಾಯಗೊಂಡ ಬೈಕ್ ಸವಾರರಾದ ಚರಣ್ ಹಾಗೂ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply