LATEST NEWS
ಕರೋನಾ ಎಮೆರ್ಜೆನ್ಸಿಗೆ ಉಡುಪಿ ಸ್ತಬ್ದ
ಕರೋನಾ ಎಮೆರ್ಜೆನ್ಸಿಗೆ ಉಡುಪಿ ಸ್ತಬ್ದ
ಉಡುಪಿ ಮಾರ್ಚ್ 24: ಕೊರೋನಾ ಎಮರ್ಜೆನ್ಸಿ ಹಿನ್ನಲೆ ಉಡುಪಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಌ಼ಡೀ ಜಿಲ್ಲೆ ಸ್ತಬ್ದವಾಗಿದೆ. ಕುಂದಾಪುರದಲ್ಲಿ ಜಿಲ್ಲಾ ಲಾಕ್ ಡೌನ್ ಗೆ ಸಾರ್ವಜನಿಕ ರ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ಅನಗತ್ಯವಾಗಿ ರಸ್ತೆಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸುದಾಗಿ ಪೊಲೀಸ್ ರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಡಳಿತ ಕಠಿಣ ಆದೇಶದ ನಡುವೆಯು ರಸ್ತೆಯಲ್ಲಿರು ಕೆಲವರು ತಿರುಗಾಡುತ್ತಿರುವ ಹಿನ್ನಲೆ ಸಿಟಿ ರೌಂಡ್ಸ್ ಹಾಕಿ ಪೊಲೀಸರು ವಾರ್ನಿಂಗ್ ನೀಡುತ್ತಿದ್ದಾರೆ. ಪಡುಬಿದ್ರಿ ಪೇಟೆ ಸಂಪೂರ್ಣ ಸ್ತಬ್ಧ. ಕರ್ನಾಟಕ ಸರಕಾರ ಕರ್ಫ್ಯೂ ಹೇರಿದ ಹಿನ್ನೆಲೆಯಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯದೆ ಮೆಡಿಕಲ್ ಶಾಪ್, ತುರ್ತು ಅವಶ್ಯಕತೆ ಮಳಿಗೆಗಳು ತೆರೆದಿವೆ.
ಹೆದ್ದಾರಿಯಲ್ಲಿ ಅಲ್ಲಲ್ಲಿ ಕೆಲವು ವಾಹನಗಳ ಓಡಾಟ ಬಿಟ್ಟರೆ ಉಳಿದಂತೆ ಎಲ್ಲವೂ ಬಂದ್. ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಪಡುಬಿದ್ರಿ ಠಾಣಾಧಿಕಾರಿ ಸ್ವತಃ ಸಿಬ್ಬಂದಿಗಳೊಂದಿಗೆ ಗಸ್ತು ತಿರುಗಿ ತಮ್ಮ ವಾಹನಗಳ ಮೈಕ್ ಮೂಲಕ ಜನ ಜಾಗ್ರತಿ ಸಂದೇಶ ತಿಳಿಸುವ ಪ್ರಯತ್ನ ಮಾಡಿ ಜನಜಂಗುಳಿ ಇದ್ದ ಸ್ಥಳಕ್ಕೆ ಲಾಟಿ ರುಚಿ ತೋರಿಸಲು ಸಜ್ಜಾಗಿದ್ದಾರೆ.ಅನಗತ್ಯವಾಗಿ ತಿರುಗುವವರ ಮೇಲೆ ಕೇಸು ದಾಖಲಿಸಲಾಗುವುದು ಎಂದು ಪ್ರಚಾರ ಮಾಡಿದರು.