LATEST NEWS
ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ನಿಧನ

ವ್ಯಾಟಿಕನ್ ಸಿಟಿ ಎಪ್ರಿಲ್ 21: ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ಅವರು ಸೋಮವಾರ ಬೆಳಿಗ್ಗೆ ನಿಧನರಾದರು ಎಂದು ವ್ಯಾಟಿಕನ್ ಕ್ಯಾಮೆರ್ಲೆಂಗೊ ಕಾರ್ಡಿನಲ್ ಕೆವಿನ್ ಫೆರೆಲ್ ಘೋಷಿಸಿದ್ದಾರೆ.
ಬೆಳಿಗ್ಗೆ 7:35 ಕ್ಕೆ ರೋಮ್‌ನ ಬಿಷಪ್ ಫ್ರಾನ್ಸಿಸ್ ಅವರು ತಮ್ಮ ಭೂಮಿಯನ್ನು ತೊರೆದು ತಮ್ಮ ತಂದೆಯ ಮನೆಗೆ ಮರಳಿದರು. ಅವರ ಇಡೀ ಜೀವನವು ಭಗವಂತನ ಮತ್ತು ಚರ್ಚ್‌ನ ಸೇವೆಗೆ ಸಮರ್ಪಿತವಾಗಿತ್ತು” ಎಂದು ಫಾರೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವು ತಿಂಗಳುಗಳ ಆಸ್ಪತ್ರೆ ಚಿಕಿತ್ಸೆಯ ನಂತರ ಮಾರ್ಚ್‌ನಲ್ಲಿ ಮನೆಗೆ ಮರಳಿದ್ದರು. ಇತ್ತೀಚೆಗೆ ಗುಡ್‌ಪ್ರೈಡೆ ದಿನ ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದರು.
