FILM
ಖ್ಯಾತ ಸಿನಿ ಜರ್ನಲಿಸ್ಟ್ ರಾಜೀವ್ ಮಸಂದ್‌ಗೆ ಕೊರೊನಾ : ಸ್ಥಿತಿ ಗಂಭೀರ

ಮುಂಬೈ, ಮೇ 03: ಖ್ಯಾತ ಸಿನಿಮಾ ಪತ್ರಕರ್ತ ಮತ್ತು ವಿಮರ್ಶಕ ರಾಜೀವ್ ಮಸಂದ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ರಾಜೀವ್ ಮಸಂದ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಮುಂಬೈನ ಕೋಕಿಲಾಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾವು ಬದುಕಿನ ನಡುವೆ ಹೋರಾಡುತ್ತಿರುವ ರಾಜೀವ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಸಿನಿ ಗಣ್ಯರು ಹಾರೈಸುತ್ತಿದ್ದಾರೆ. ಸದ್ಯ ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅನೇಕ ವರ್ಷಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ರಾಜೀವ್ ಮಸಂದ್ ಸಾಕಷ್ಟು ಸಿನಿಮಾಗಳ ವಿಮರ್ಶೆ ಮಾಡಿದ್ದಾರೆ. ಜೊತೆಗೆ ಭಾರತೀಯ ಸಿನಿಮಾರಂಗದ ಖ್ಯಾತ ಕಲಾವಿದರ ಸಂದರ್ಶನ ಮಾಡಿದ್ದಾರೆ.

ಬಾಲಿವುಡ್ ಮಾತ್ರವಲ್ಲದೆ, ತೆಲುಗು, ತಮಿಳು ಸೇರಿದಂತೆ ಬೇರೆ ಬೇರೆ ಭಾಷೆಯ ಪ್ರಮುಖ ನಟರ ಸಂದರ್ಶನ ಮಾಡಿದ್ದಾರೆ. ರಾಜೀವ್ ಮಸಂದ್ ಬೇಗ ಗುಣಮುಖರಾಗಲಿ ಎಂದು ಸುನಿಲ್ ಶೆಟ್ಟಿ, ರಿಚಾ ಚಡ್ಡಾ, ರಾಹುಲ್ ದೇವ್ ಸೇರಿದಂತೆ ಅನೇಕ ಗಣ್ಯರು ಹಾರೈಸಿದ್ದಾರೆ.