Connect with us

    DAKSHINA KANNADA

    ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಎರಡನೇ ಮಹಡಿಯಿಂದ ಜಿಗಿದ ಕೊರೊನಾ ಸೋಂಕಿತ

    ಮಂಗಳೂರು, ಮೇ 03: ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಎರಡನೇ ಮಹಡಿಯಿಂದ ಕೊರೊನಾ ಸೋಂಕಿತ ಹಾರಿದ ಘಟನೆ ಇಂದು ನಡೆದಿದೆ.

    ಮಂಗಳೂರಿನ ಕಲ್ಲಮುಂಡ್ಕೂರಿನ ಬನಂಗಡಿ ನಿವಾಸಿ ಹರೀಶ್(30) ಕೋವಿಡ್ ಆಸ್ಪತ್ರೆಯ ಎರಡನೇ ಮಹಡಿಯಿಂದ ಹಾರಿದಾತ. ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಸೋಂಕಿತ ಪಾರಾಗಿದ್ದಾನೆ.

    ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಈತನಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಈತ ಏಕಾಏಕಿ ಕೋವಿಡ್ ಆಸ್ಪತ್ರೆಯ 2 ನೇ ಮಹಡಿಯಿಂದ ಹಾರಿದ್ದಾನೆ. ಪರಿಣಾಮ ತಲೆಗೆ ಹಾಗೂ ದೈಹಿಕವಾಗಿ ಸಣ್ಣಪುಟ್ಟ ಗಾಯಗಳಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply