Connect with us

    LATEST NEWS

    ಉಗ್ರ ದಾಳಿಗೆ ಕಾರಣವಾಗಿದ್ದ ಪ್ರೋಫಿಟ್ ಮಹಮ್ಮದ್ ವ್ಯಂಗ್ಯ ಚಿತ್ರ ಮತ್ತೆ ಪ್ರಕಟಿಸಿದ ಚಾರ್ಲಿ ಹೆಬ್ಡೋ

    ಉಗ್ರ ದಾಳಿಗೆ ಕಾರಣವಾಗಿದ್ದ ಪ್ರೋಫಿಟ್ ಮಹಮ್ಮದ್ ವ್ಯಂಗ್ಯ ಚಿತ್ರ ಮತ್ತೆ ಪ್ರಕಟಿಸಿದ ಚಾರ್ಲಿ ಹೆಬ್ಡೋ 

    ಪ್ಯಾರೀಸ್, ಸೆಪ್ಟಂಬರ್ 2: ಪ್ರೆಂಚ್ ಮ್ಯಾಗಝೀನ್ ಚಾರ್ಲೀ ಹೆಬ್ಡೋ ಕಛೇರಿಗೆ ಉಗ್ರಗಾಮಿಗಳ ದಾಳಿಗೆ ಕಾರಣವಾದ ಕಾರ್ಟೂನನ್ನು ಪತ್ರಿಕೆ ಮತ್ತೆ ಪ್ರಕಟಿಸಿದೆ.

    ಫೆಂಚ್ ನ ಪ್ರಮುಖ ಮ್ಯಾಗಝೀನ್ ಗಳಲ್ಲಿ ಒಂದಾಗಿರುವ ಚಾರ್ಲಿ ಹೆಬ್ಡೋ ಪೋಫಿಟ್ ಮಹಮ್ಮದ್ ಅವರು ಬಾಂಬ್ ಗಳಿಂದ ಕೂಡಿದ ತಲೆದಿರಿಸು ಧರಿಸಿರುವ ವ್ಯಂಗ್ಯ ಚಿತ್ರವನ್ನು ಪ್ರಕಟಿಸಿತ್ತು.

    2005 ರಲ್ಲಿ ಡ್ಯಾನಿಷ್ ಪತ್ರಿಕೆ ಈ ವ್ಯಂಗ್ಯ ಚಿತ್ರವನ್ನು ಮೊದಲು ಪ್ರಕಟಿಸಿದ್ದು, ಒಂದು ವರ್ಷದ ಬಳಿಕ ಚಾರ್ಲಿ ಹೆಬ್ಡೋ ಈ ಚಿತ್ರವನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿತ್ತು.

    ಇದು ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ವಿಶ್ವದಾದ್ಯಂತ ಪತ್ರಿಕೆಯ ವಿರುದ್ಧ ಪ್ರತಿಭಟನೆಯನ್ನೂ ನಡೆಸಲಾಗಿತ್ತು.

    2006 ರ ಬಳಿಕದ ದಿನಗಳಲ್ಲಿ ಪತ್ರಿಕೆಗೆ ನಿರಂತರವಾಗಿ ಬೆದರಿಕೆ ಕರೆಗಳು, ಅಂತರ್ಜಾಲದ ಮೂಲಕ ಬೆದರಿಕೆಗಳು ಬರಲಾರಂಭಿಸಿತ್ತು.

    ಆ ಬಳಿಕದ ಬೆಳವಣಿಗೆಯಲ್ಲಿ 2015 ರ ಜನವರಿಯಲ್ಲಿ ಪ್ಯಾರೀಸ್ ನಲ್ಲಿರುವ ಪತ್ರಿಕೆಯ ಕಛೇರಿಗೆ ಉಗ್ರರ ದಾಳಿ ನಡೆದಿತ್ತು.

    ಈ ದಾಳಿಯಲ್ಲಿ ಪತ್ರಿಕೆಯ ಖ್ಯಾತ ಕಾರ್ಟೂನಿಸ್ಟ್ ಗಳು ಸೇರಿದಂತೆ ಕಛೇರಿಯಲ್ಲಿದ್ದ 12 ಸಿಬ್ಬಂದಿಗಳು ಸಾವನ್ನಪ್ಪಿದ್ದರು.

    ದಾಳಿ ನಡೆಸಿದ ಮೂವರು ಉಗ್ರರರನ್ನು ಬಳಿಕ ಪ್ಯಾರೀಸ್ ಪೋಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

    ಉಗ್ರರಿಗೆ ಶಸ್ತಾಸ್ತ್ರಗಳನ್ನು ಪೂರೈಸಿದ 13 ಪುರುಷ ಹಾಗೂ ಒರ್ವ ಮಹಿಳೆಯನ್ನು ಆರೋಪಿಗಳಾಗಿ ಗುರುತಿಸಲಾಗಿದ್ದು, ಎಲ್ಲಾ ಆರೋಪಿಗಳ ವಿಚಾರಣೆ ನಾಳೆ ನಡೆಯಲಿದೆ.

    ಈ ಹಿನ್ನಲೆಯಲ್ಲಿ ಪತ್ರಿಕೆ ಮತ್ತೊಮ್ಮೆ ಹಿಂದೆ ಪ್ರಕಟಿಸಿದ ಫೋಫಿಟ್ ಮಹಮ್ಮದ್ ರ ವ್ಯಂಗ ಚಿತ್ರವನ್ನು ಮತ್ತೆ ಪ್ರಕಟಿಸುವುದಾಗಿ ಹೇಳಿತ್ತು.

    ವ್ಯಂಗ ಚಿತ್ರ ಪ್ರಕಟಿಸುವ ಹಾಗೂ ಅದನ್ನು ನಿರಾಕರಿಸುವ ಹಕ್ಕು ಎಲ್ಲರಿಗೂ ಇದ್ದು, ಉಗ್ರರ ಕೃತ್ಯವನ್ನು ಖಂಡಿಸುವ ಉದ್ದೇಶದಿಂದ ಪತ್ರಿಕೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply