LATEST NEWS
ಕುಕ್ಕೆ ಗಲಾಟೆ ಹಿಂದೂ ಸಂಘಟನೆಗಳ ಭಿನ್ನಮತ ಶಮನಕ್ಕೆ ಸಭೆ
ಕುಕ್ಕೆ ಗಲಾಟೆ ಹಿಂದೂ ಸಂಘಟನೆಗಳ ಭಿನ್ನಮತ ಶಮನಕ್ಕೆ ಸಭೆ
ಮಂಗಳೂರು ಅಕ್ಟೋಬರ್ 29: ಕುಕ್ಕೆ ಸುಬ್ರಹ್ಮಣ್ಯ ಮಠದ ವಿಚಾರದಲ್ಲಿ ಹಿಂದೂ ಸಂಘಟನೆಗಳ ನಡುವೆ ನಡೆಯುತ್ತಿರುವ ಭಿನ್ನಮತ ಶಮನಕ್ಕೆ ಸಂಘ ಪರಿವಾರ ಮುಂದಾಗಿದೆ. ಹಲ್ಲೆ ಹಂತಕ್ಕೆ ತಲುಪಿದ ಈ ಭಿನ್ನಮತವನ್ನು ಆದಷ್ಟು ಬೇಗ ಸರಿಮಾಡುವ ಹಿನ್ನಲೆಯಲ್ಲಿ ಸಂಘಪರಿವಾರದ ಹಿರಿಯರು ಸಭೆ ಕರೆಯಲು ನಿರ್ಧರಿಸಿದ್ದಾರೆ.
ಹಿಂದು ಸಂಘಟನೆ ಮುಖಂಡರಾದ ಚೈತ್ರಾ ಕುಂದಾಪುರ ಮತ್ತು ಗುರುಪ್ರಸಾದ್ ಪಂಜ ಗುಂಪುಗಳ ನಡುವಿನ ಭಿನ್ನಮತ ಸದ್ಯದಲ್ಲೆ ಶಮನವಾಗುವ ಹಂತಕ್ಕೆ ಬಂದಿದೆ. ಉಭಯ ಗುಂಪುಗಳ ತಲಾ ಐವರು(ಒಟ್ಟು 10 ) ಸದಸ್ಯರು ಹಾಗೂ ಸುಮಾರು 12 ಮಂದಿ ಸಂಘದ ಹಿರಿಯ ಸದಸ್ಯರ ಉಪಸ್ಥಿತಿಯಲ್ಲಿ ಇನ್ನೆರಡು ದಿನಗಳಲ್ಲಿ ನಗರದಲ್ಲಿ ಸಂಧಾನ ಸಭೆ ನಡೆಯುವ ಸಾಧ್ಯತೆ ಇರುವುದಾಗಿ ಸಂಘದ ಮೂಲ ತಿಳಿಸಿದೆ.
ಸಂಧಾನ ಬೈಠಕ್ನಲ್ಲಿ ಭಾಗವಹಿಸಲು ತಂಡದ ಐವರು ಯಾವುದೇ ಸಂದರ್ಭ ಸಿದ್ಧರಾಗಿರುವಂತೆ ಉಭಯ ಗುಂಪುಗಳಿಗೆ ಸಂಘದ ಹಿರಿಯರಿಂದ ಸಂದೇಶ ರವಾನೆಯಾಗಿದೆ. ಪ್ರಕರಣ ಸಂಬಂಧಿಸಿ ಚೈತ್ರಾ ಕುಂದಾಪುರ ಹಾಗೂ ಆಕೆಯ ಗುಂಪಿನ ಇತರ ಆರು ಮಂದಿ ಸದಸ್ಯರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಗುರುಪ್ರಸಾದ್ ಪಂಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ತಂಡದ ಆಶಿತ್ ಕಲ್ಲಾಜೆ, ತೀರ್ಥರಾಮ ಅವರನ್ನು ಒಳಗೊಂಡಿರುವ ತಂಡದ ವಿರುದ್ಧ ಕೂಡ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ.
ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಗುರು ಪ್ರಸಾದ್ ಪಂಜ ಹಾಗೂ ಕರಾವಳಿಯಲ್ಲಿ ಹಿಂದು ಸಂಘಟನೆಯ ಫೈರ್ಬ್ರಾಂಡ್ ಎಂದೇ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ನಡುವೆ ಸುಬ್ರಹ್ಮಣ್ಯದಲ್ಲಿ ಇತ್ತೀಚೆಗೆ ಸಂಘರ್ಷ ಹಾಗೂ ದಾಳಿ ನಡೆದಿತ್ತು.
ಸಂಧಾನ ಬಹುತೇಕ ಖಚಿತ. ಯಾಕೆಂದರೆ ಸಂಘಟನೆಯಲ್ಲಿ ನಮ್ಮ ನಾಯಕಿ ಬಹಳಷ್ಟು ದೂರ ಬಂದಿದ್ದಾರೆ. ಉತ್ತಮ ಹೆಸರು ಗಳಿಸಿದ್ದಾರೆ. ಮತ್ತೆ ಸಂಘಟನೆ ತೊರೆಯುವ ವಿಷಯ ಅವರು ಆಲೋಚನೆಯೂ ಮಾಡಲಾರರು. ಆದ್ದರಿಂದ ಅಂತಿಮವಾಗಿ ಸಂಘದ ಹಿರಿಯರ ಮಾತಿಗೆ ಬೆಲೆಕೊಟ್ಟು ಸಂಧಾನಕ್ಕೆ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು ಎಂದು ಚೈತ್ರಾ ತಂಡದ ಸದಸ್ಯರೋರ್ವರು ಪ್ರತಿಕ್ರಿಯಿಸಿದ್ದಾರೆ.
Facebook Comments
You may like
-
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
-
ಎರಡು ಹುಲಿಗಳ ನಡುವೆ ಕಾಳಗದ ವಿಡಿಯೋ ವೈರಲ್
-
ಸಾರ್ವಜನಿಕವಾಗಿ ಬಡಿದಾಡಿಕೊಂಡ ಪುತ್ತೂರಿನ ಖಾಸಗಿ ಶಾಲೆಯ ವಿಧ್ಯಾರ್ಥಿಗಳು
-
ಟೈಮಿಂಗ್ ವಿಚಾರದಲ್ಲಿ ನಡು ರಸ್ತೆಯಲ್ಲಿ ಖಾಸಗಿ ಬಸ್ ಸಿಬ್ಬಂದಿಗಳ ಹೊಡೆದಾಟ…!!
-
ಎರ್ರಾಬಿರ್ರಿಯಾಗಿ ವಾಹನ ಚಲಾಯಿಸಿರುವುದನ್ನು ಪ್ರಶ್ನಿಸಿದ ದಂಪತಿಗೆ ಮಾರಣಾಂತಿಕ ಹಲ್ಲೆ
-
ಕೊರೋನಾ ಸೋಂಕಿತನಿಂದ ಕೊರೋನಾ ವಾರಿಯರ್ಸ್ ಗೆ ಪೊರಕೆಯಿಂಸದ ಹಲ್ಲೆ
You must be logged in to post a comment Login