Connect with us

    LATEST NEWS

    ಬಜಾಲ್ ಬಳಿ ಮಹಿಳೆಯ ಚಿನ್ನದ ಸರ ಎಗರಿಸಿದ್ದ ಸರಗಳ್ಳರ ಬಂಧನ

    ಮಂಗಳೂರು ಫೆಬ್ರವರಿ 24: ಮಂಗಳೂರು ನಗರದ ಬಜಾಲ್ ನ ಜೆ.ಎಮ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯಿಂದ 16 ಗ್ರಾಂ ತೂಕದ ಚಿನ್ನದ ಸರ ಕದ್ದ ಸರಗಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


    ಬಂಧಿತರನ್ನು ಕಾಸರಗೋಡಿನ ನಿವಾಸಿ ಮೊಹಮ್ಮದ್ ಅಲಿ , ಬಂಟ್ವಾಳದ ಜುಬೇರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 90 ಸಾವಿರ ಬೆಲೆ ಬಾಳುವ ಚಿನ್ನದ ಸರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತರುಗಳ ಪೈಕಿ ಮೊಹಮ್ಮದ್ ಅಲಿ ವಿರುದ್ದ ಕೇರಳ ರಾಜ್ಯದ ಬದಿಯಡ್ಕ, ಮಂಜೇಶ್ವರ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಠಾಣೆ, ವಿಟ್ಳ ಪೊಲೀಸ್ ಠಾಣೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಬರ್ಕೆ ಪೊಲೀಸ್ ಠಾಣೆ ಗಳಲ್ಲಿ ಮನೆ ಕನ್ನ ಕಳವು, ಸುಲಿಗೆ ಪ್ರಕರಣ, ಜೈಲಿನಲ್ಲಿ ಹೊಡೆದಾಟ ಸೇರಿ ಈತನ ವಿರುದ್ದ 15 ಪ್ರಕರಣಗಳು ದಾಖಲಾಗಿರುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply