Connect with us

LATEST NEWS

ಕೊನೆಗೂ ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಾರಂಭವಾದ ಸಗಟು ವ್ಯಾಪಾರ

ಕೊನೆಗೂ ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಾರಂಭವಾದ ಸಗಟು ವ್ಯಾಪಾರ

ಮಂಗಳೂರು ಎಪ್ರಿಲ್ 8: ಸೆಂಟ್ರಲ್ ಮಾರುಕಟ್ಟೆ ವ್ಯಾಪಾರ ವ್ಯವಹಾರಗಳು ಇನ್ನು ಬೈಕಂಪಾಡಿ ಎಪಿಎಂಸಿ ನಡೆಯಲಿದ್ದು, ಕಳೆದ ಹಲವು ದಿನಗಳ ಗೊಂದಲದ ಬಳಿಕ ಕೊನೆಗೂ ಹಣ್ಣು ಮತ್ತು ತರಕಾರಿ ಸಗಟು ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದು, ಇಂದು ವ್ಯಾಪಾರ ಆರಂಭಗೊಂಡಿದೆ.

ಇದಕ್ಕೂ ಮೊದಲು ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿಗಳು ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಶಾಸಕರು ಸಂಸದರ ಸಹಿತ ಜಿಲ್ಲಾಡಳಿತ ಮನವೊಲಿಸಲು ಯತ್ನ ಮಾಡಿದ್ದು ವ್ಯಾಪಾರಸ್ಥರು ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸದೆ ಬದಲಾಗಿ ನಮಗೆ ನಗರದ ವಿಶಾಲವಾದ ಪ್ರಮುಖ ಮೈದಾನಗಳಲ್ಲಿ ವ್ಯಾಪಾರಕ್ಕೆ ವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು.

ಮಂಗಳವಾರ ಎಪಿಎಂಸಿ ಕಚೇರಿಯಲ್ಲಿ ಶಾಸಕ ಡಾ.ಭರತ್‌ ಶೆಟ್ಟಿ ವೈ. ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವ್ಯಾಪಾರಿಗಳು ಭಾಗವಹಿಸಿ ವಿವಿಧ ಮೂಲ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದು ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದ್ದಾರೆ.

ಶಾಸಕರು ವ್ಯಾಪಾರಸ್ಥರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದು ವ್ಯಾಪಾರಿಗಳಿಗೆ ಬೈಕಂಪಾಡಿಯಲ್ಲಿ ಮೂರು ತಿಂಗಳ ಬಾಡಿಗೆ, ಶುಲ್ಕ ವಿಧಿಸದೆ ವ್ಯಾಪಾರಕ್ಕೆ ಅನುಮತಿ ನೀಡಿದ್ದಾರೆ.

ನಗರ ಪಾಲಿಕೆ ವ್ಯಾಪ್ತಿಯೊಳಗಿನ ಉದ್ದಿಮೆ ಪರವಾನಿಗೆ ಹೊಂದಿರುವ ಎಲ್ಲಾ ತರಕಾರಿ ಮತ್ತು ಹಣ್ಣು ಹಂಪಲು ಚಿಲ್ಲರೆ ವ್ಯಾಪಾರಸ್ಥರು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ನಲ್ಲಿ ತೆರೆದಿರುವ ಹಾಪ್‌ಕಾಮ್ಸ್‌ನಲ್ಲಿ ಅಥವಾ ಇತರ ಸಗಟು ವ್ಯಾಪಾರಿಗಳಿಂದ ಮಾತ್ರವೇ ತರಕಾರಿ ಮತ್ತು ಹಣ್ಣು ಹಂಪಲು ಖರೀದಿಸಬೇಕು ಎಂದು ಮನಪಾ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಸೂಚನೆ ನೀಡಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *