ಬಂಟ್ವಾಳ ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ

ಬಂಟ್ವಾಳ: ಕಾರಾಜೆ ಎಂಬಲ್ಲಿನ ಅಕ್ರಮ ಕಸಾಯಿಕಾನೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಅವರು ಮಾಂಸ ಸಹಿತ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿಯ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಸುಮಾರು 40 ಕೆ.ಜಿ.ಮಾಂಸ ಹಾಗೂ ನಾಲ್ಕು ಬೈಕ್ ಒಂದು ಕಾರು ಹಾಗೂ ರಿಕ್ಷಾ ವನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಮಾರ್ನಬೈಲು ಸಮೀಪದ ಕಾರಾಜೆ ಎಂಬಲ್ಲಿನ ಮನೆಯೊಂದರಲ್ಲಿ ಅನೇಕ ವರ್ಷಗಳಿಂದ ಅಕ್ರಮವಾಗಿ ದನಗಳನ್ನು ತಂದು ವದೆ ಮಾಡಲಾಗುತ್ತಿದೆ ಎಂಬ ಮಾಹಿತಿ ಬಂಟ್ವಾಳ ಪೋಲೀಸರಿಗೆ ಸಿಕ್ಕಿತ್ತು.

ಇಂದು ಖಚಿತವಾದ ಮಾಹಿತಿ ಹಿನ್ನೆಲೆಯಲ್ಲಿ ಬಂಟ್ವಾಳ ಪೋಲೀಸರು ದಾಳಿ ನಡೆಸಿದಾಗ ಮನೆಯಲ್ಲಿನ ಒಂದು ಶೆಡ್ ನಲ್ಲಿ ಅಕ್ರಮವಾಗಿ ತಂದ ಗೋವುಗಳನ್ನು ಯಾವುದೇ ಅನುಮತಿ ರಹಿತವಾಗಿ ಕಡಿದು ಮಾಂಸ ಮಾಡಲಾಗುತ್ತಿತ್ತು.

ಇವರ ದಾಳಿಯ ವೇಳೆ ಮಾಂಸ ಕಡಿಯುತ್ತಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಇವರು ಮಾಂಸ ಮಾಡಿದ ಬಳಿಕ ಮನೆಮನೆಗೆ ದ್ವಿಚಕ್ರ ಹಾಗೂ ರಿಕ್ಷಾದ ಮೂಲಕ ಮನೆಮನೆಗೆ ಮಾರಾಟ ಮಾಡುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿತ್ತು.