LATEST NEWS
ಚಿನ್ನ ಹುಡುಕಲು ಹೋಗಿ 48 ಲಕ್ಷ ಮೌಲ್ಯದ ವಾಚ್ ನ್ನು ಪುಡಿ ಮಾಡಿದ ಕ್ಯಾಲಿಕಟ್ ನ ಕಸ್ಟಮ್ಸ್ ಅಧಿಕಾರಿಗಳು
ಭಟ್ಕಳ : ದುಬೈನಿಂದ ಅಕ್ರಮ ಚಿನ್ನ ಸಾಗಾಟ ಪ್ರಕರಣ ಇದೀಗ ಅಂತರಾಷ್ಟ್ರೀಯ ಪ್ರಯಾಣಿಕರ ಪಾಲಿಗೆ ಸಂಕಷ್ಟತಂದೊಡ್ಡಿದೆ. ಅಕ್ರಮ ಚಿನ್ನ ಸಾಗಾಟ ಮಾಡುವವರನ್ನು ಪತ್ತೆ ಹಚ್ಚಲು ಹೋಗಿ ಕ್ಯಾಲಿಕಟ್ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದು, ಅಕ್ರಮ ಚಿನ್ನ ಹುಡುಕಲು ಹೋಗಿ ಪ್ರಯಾಣಿಕರೊಬ್ಬರ 48 ಲಕ್ಷ ರೂಪಾಯಿ ಬೆಲೆ ಬಾಳು ವಾಚ್ ನ್ನು ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ.
ಭಟ್ಕಳದ ಕಾರಗದ್ದೆ ನಿವಾಸಿ ಮೊಹಮ್ಮದ್ ಇಸ್ಮಾಯಿಲ್ ಅವರು ವಿಸಿಟಿಂಗ್ ವೀಸಾದಲ್ಲಿ ದುಬೈ ಹೋಗಿದ್ದರು. ಇಸ್ಮಾಯಿಲ್ ಸಹೋದರ 2017ರಲ್ಲಿ ದುಬೈನಲ್ಲಿರುವ ಮಾಲೊಂದರಿಂದ 48 ಲಕ್ಷಕ್ಕೆ ವಾಚ್ ಒಂದನ್ನು ಖರಿದೀಸಿದ್ದರು. ಅಡಿಮೂವರ್ಸ್ ಪಿಗುಯೆಟ್ ಕಂಪೆನಿಯ ವಾಚ್ ನ ಬೆಲೆ 50 ಲಕ್ಷಕ್ಕಿಂತಲೂ ಅಧಿಕ ಇರುತ್ತದೆ. ಇಸ್ಮಾಯಿಲ್ ಅವರ ಸಹೋದರ ಸೆಕೆಂಡ್ ಹ್ಯಾಂಡ್ ಶಾಪ್ ಒಂದರಲ್ಲಿ ವಾಚ್ ನ್ನು 48 ಲಕ್ಷಕ್ಕೆ ಖರೀದಿಸಿದ್ದರು. ಇದನ್ನು ಇಸ್ಮಾಯಿಲ್ ಹಿಂದುರುಗುವಾಗ ಅವರ ಸಹೋದರನಿಗೆ ನೀಡಿದ್ದರು.
ಅದನ್ನು ತೆಗೆದುಕೊಂಡು ಬಂದ ಇಸ್ಮಾಯಿಲ್ ಅವರನ್ನು ಕ್ಯಾಲಿಕಟ್ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಒಳಪಡಿಸಿದ್ದರು, ಈ ಸಂದರ್ಭ ಅನುಮಾನದ ಮೇರೆಗೆ ಇಸ್ಮಾಯಿಲ್ ತಂದಿದ್ದ ವಾಚ್ ನ್ನು ತೆಗೆದುಕೊಂಡು ಹೋಗಿ ಅದನ್ನು ಪುಡಿ ಮಾಡಿ ಚಿನ್ನ ಇದೆಯಾ ಅಂತ ಪರಿಶೀಲನೆ ಮಾಡಿದ್ದಾರೆ.
ಆದರೆ ಕಸ್ಟಮ್ಸ್ ಅಧಿಕಾರಿಗಳಿಗೆ ಯಾವುದೇ ಅಕ್ರಮ ಚಿನ್ನ ಸಾಗಾಟ ಸಿಗದ ಹಿನ್ನಲೆ ವಾಚ್ ನ್ನು ಇಸ್ಮಾಯಿಲ್ ಅವರಿಗೆ ಹಿಂತಿರುಗಿಸಿದ್ದಾರೆ. ಆದರೆ ಸಂಪೂರ್ಣ ಪುಡಿಯಾದ ವಾಚ್ ನೋಡಿದ ಇಸ್ಮಾಯಿಲ್ ನನಗೆ ನನ್ನ ವಾಚ್ ಮೊದಲಿನ ಸ್ಥಿತಿಯಲ್ಲಿಯೇ ಬೇಕೆಂದು ಅಧಿಕಾರಿಗಳಿಗೆ ಕೇಳಿದ್ದಾರೆ. ಕಡಿಮೆ ಬೆಲೆ ವಾಚ್ ಎಂದು ಅಧಿಕಾರಿಗಳು ಅದರ ಬೆಲೆ ಕೇಳಿದಾಗ ಅಧಿಕಾರಿಗಳಿಗೆ ಶಾಕ್ ಆಗಿದೆ. ಇದೀಗ ತನ್ನ ವಾಚ್ ತನಗೆ ವಾಪಸ್ ಮೊದಲಿನ ಸ್ಥಿತಿಯಲ್ಲೇ ಕೊಡಿಸಬೇಕು ಎಂದು ಕ್ಯಾಲಿಕಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.