ಮತ ಚಲಾಯಿಸಿ ಮದುವೆಗೆ ತೆರಳಿದ ಮದುಮಗಳು
ಮಂಗಳೂರು ಮೇ 12: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬೆಳಗ್ಗೆ 7 ಗಂಟೆಯಿಂದಲೇ ಬಿರುಸಿನಿಂದ ಮತದಾನ ನಡೆಯುತ್ತಿದೆ. ಈ ನಡುವೆ ಮದುವೆಗೂ ಮುನ್ನ ಮದುಮಗಳು ಮತದಾನ ಮಾಡಿದ ಘಟನೆ ನಡೆದಿದೆ.

ಮಂಗಳೂರು ಹೊರವಲಯದ ಪಚ್ಚನಾಡಿಯ ನಿವಾಸಿ ಮದುಮಗಳು ವಿಯೋಲಾ ಮಾರಿಯಾ ಫೆರ್ನಾಂಡೀಸ್ ಅವರು ಇಂದು ತಮ್ಮ ಮದುವೆ ಸಂಭ್ರಮದ ನಡುವೆಯೂ ಮತದಾನ ಮಾಡಿ ಮಾದರಿಯಾಗಿದ್ದಾರೆ.
ಇಂದು ಬೆಳಿಗ್ಗೆ 7 ಗಂಟೆಗೆ ನಗರದ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಮತದಾನ ಮಾಡಿದ ಬಳಿಕ ಬೆಳ್ತಂಗಡಿಯಲ್ಲಿ ನಡೆಯೋ ಮದುವೆಗೆ ಮದುಮಗಳು ತೆರಳಿದ್ದಾರೆ. ಮಂಗಳೂರಿನ ಬೆಳ್ತಂಗಡಿಯ ವರ ಸಿಲ್ವೆಸ್ಟರ್ ರೋಡ್ರಿಗಸ್ ಜತೆ ಯುವತಿಯ ಮದುವೆ ಇಂದು ನಡೆಯುತ್ತಿದೆ.
ಒಟ್ಟಿನಲ್ಲಿ ವಿಯೋಲಾ ಅವರು ಮದುವೆಗೂ ಮುನ್ನ ಮತದಾನ ಮಾಡಿ ಮಾದರಿಯಾಗಿದ್ದಾರೆ.