Connect with us

    LATEST NEWS

    ಕೇಂದ್ರದಲ್ಲಿರುವ ಎನ್ ಡಿಎ ಸರ್ಕಾರ ಮತ್ತೊಮ್ಮೆ ಬರುವುದಿಲ್ಲ – ಆಸ್ಕರ್ ಫೆರ್ನಾಂಡಿಸ್

    ಕೇಂದ್ರದಲ್ಲಿರುವ ಎನ್ ಡಿಎ ಸರ್ಕಾರ ಮತ್ತೊಮ್ಮೆ ಬರುವುದಿಲ್ಲ – ಆಸ್ಕರ್ ಫೆರ್ನಾಂಡಿಸ್

    ಉಡುಪಿ ಮೇ 12: ಕೇಂದ್ರದಲ್ಲಿರುವ ಎನ್ ಡಿಎ ಸರ್ಕಾರ ಮತ್ತೊಮ್ಮೆ ಬರುವುದಿಲ್ಲ, ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗುತ್ತೇನೆ ಎಂದು ಹೇಳಿದ್ದಾರೆ ಎಂದು ಕಾಂಗ್ರೇಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ತಿಳಿಸಿದ್ದಾರೆ.

    ಉಡುಪಿಯಲ್ಲಿ ಅಜ್ಜರಕಾಡು ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಅವರು ಜಿಲ್ಲೆಯ ವಾತಾವರಣ ಶಾಂತಿಯುತವಾಗಿದ್ದು, ಜನರಲ್ಲಿ ಕಾಣುವ ಹುಮ್ಮಸ್ಸು ನೋಡುವಾಗ ಬಹುಮತ ಬರುವ ವಿಶ್ವಾಸವಿದೆ ಎಂದರು.

    ರಾಜ್ಯದಲ್ಲಿ ಕಾಂಗ್ರೇಸ್ ಗೆ ಜನ ದೊಡ್ಡ ಸ್ವಾಗತ ನೀಡಿದ್ದಾರೆ, ಅಲೆ-ಅಲೆಗಳಲ್ಲಿ ಜನ ಎದ್ದು ಬಂದಿದ್ದಾರೆ ಈ ಹಿನ್ನಲೆಯಲ್ಲಿ ಕಾಂಗ್ರೇಸ್ ಗೆ ಜನ ಸ್ಪಷ್ಟವಾದ ಮತವನ್ನು ಕೊಡುತ್ತಾರೆ ಎಂದು ಹೇಳಿದರು.

    1975 ರಲ್ಲಿ ಇಡಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು, ಆದರೆ ಆದ್ರೆ ಕರ್ನಾಟಕ – ಆಂದ್ರಪ್ರದೇಶದಲ್ಲಿ ಬಹುಮತ ಬಂದಿದೆ. ಇದು ಕರ್ನಾಟಕದ ಇತಿಹಾಸ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply