Connect with us

    FILM

    Breaking News: 20 ವರ್ಷ ಪ್ರಾಯದ ಹಿಂದಿ ಕಿರುತೆರೆ ನಟಿ ನೇಣು ಬಿಗಿದು ಆತ್ಮಹತ್ಯೆ

    ಮುಂಬೈ ಡಿಸೆಂಬರ್ 24: ಹಿಂದಿಯ ಖ್ಯಾತ ಕಿರುತೆರೆ ಧಾರವಾಹಿ ಅಲಿ ಬಾಬಾ ದಾಸ್ತಾನ್-ಎ-ಕಾಬೂಲ್ ನಟಿ 20 ವರ್ಷ ಪ್ರಾಯದ ತುನಿಶಾ ಶರ್ಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲಗಳ ಪ್ರಕಾರ ನಟಿ ತುನಿಶಾ ಶರ್ಮ ಮೆಕಪ್ ರೂಂ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


    ನಟ ಶಿಜನ್ ತನ್ನ ತನ್ನ ಶಾಟ್ ಮುಗಿಸಿ ತನ್ನ ಮೇಕಪ್ ಕೋಣೆಯನ್ನು ತೆರಳಿದ ಸಂದರ್ಭ ನಟಿ ತುನೀಶಾ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಹೇಳಲಾಗಿದ್ದಪ, ಕೂಡಲೇ ಬಾಗಿಲು ಒಡೆದಾಗ ತುನಿಶಾ ಶರ್ಮ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅವರು ಸಾವನಪ್ಪಿದ್ದರು.


    ತುನೀಶಾ ಚಿಕ್ಕ ವಯಸ್ಸಿನಲ್ಲೇ ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಹೆಸರುಗಳಿಸಿದ್ದರು. ವಿದ್ಯಾಬಾಲನ್ ಕತ್ರಿನಾ ಕೈಫ್ ಜೊತೆ ಸಿನೆಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಸರಣಿ ಆತ್ಮಹತ್ಯೆಯಿಂದ ಸುದ್ದಿಯಾಗಿದ್ದ ಕಿರುತೆರೆ ಇದೀಗ ಸ್ವಲ್ಪ ಸಮಯದ ಬಳಿಕ ಮತ್ತೊಬ್ಬ ನಟಿಯ ಆತ್ಮಹತ್ಯೆಯಿಂದ ಶಾಕ್ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply