Connect with us

    LATEST NEWS

    ಲಿಫ್ಟ್ ನಲ್ಲಿ ಸಿಲುಕಿ ಸಾವನಪ್ಪಿದ 7 ವರ್ಷದ ಬಾಲಕ

    ಲಿಫ್ಟ್ ನಲ್ಲಿ ಸಿಲುಕಿ ಸಾವನಪ್ಪಿದ 7 ವರ್ಷದ ಬಾಲಕ

    ಮಂಗಳೂರು ಅಗಸ್ಟ್ 24: ಲಿಫ್ಟ್ ನಲ್ಲಿ ಸಿಲುಕಿ 7 ವರ್ಷದ ಬಾಲಕ ಸಾವನಪ್ಪಿರುವ ಘಟನೆ ಮಂಗಳೂರಿನ ದ ವಾಸ್‌ ಲೇನ್‌ ರಸ್ತೆಯ ಕ್ಷಮಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

    ಮೃತ ಬಾಲಕನನ್ನು ಪೊಳಲಿ ಅಡ್ಡೂರು ನಿವಾಸಿ ಮೊಹಮ್ಮದ್‌ ಬಶೀರ್‌ ಎಂಬವರ ಪುತ್ರ ಮೊಹಮ್ಮದ್‌ ಸಿನಾನ್‌ ಎಂದು ಗುರುತಿಸಲಾಗಿದೆ. ಈತ ನಗರದ ಬರಾಕ್ ಶಾಲೆಯಲ್ಲಿ 1 ನೇ ತರಗತಿ ಕಲಿಯುತ್ತಿದ್ದಾನೆ.

    ಗುರುವಾರ ಸಂಜೆ 7 ಗಂಟೆ ವೇಳೆಗೆ ತಾಯಿ ಹಾಗೂ ಮೂವರು ಮಕ್ಕಳು ಹೊರಗೆ ಹೋಗಲು ಸಿದ್ಧರಾಗಿ, ಫ್ಲ್ಯಾಟ್‌ಗೆ ಬೀಗ ಹಾಕುತ್ತಿದ್ದರು. ಈ ಸಂದರ್ಭ ಸಿನಾನ್‌ ಏಕಾಏಕಿ ಮೊದಲ ಮಹಡಿಯಲ್ಲಿರುವ ತಮ್ಮ ಫ್ಲ್ಯಾಟ್‌ನಿಂದ ಹೊರಗೆ ಬಂದು ಲಿಫ್ಟ್‌ನೊಳಗೆ ಹೋಗಿದ್ದಾನೆ.

    ಬಾಲಕ ಲಿಪ್ಟ್ ನ ಒಳಗೆ ಹೋಗುವಷ್ಟರಲ್ಲೇ ಬಾಗಿಲು ಮುಚ್ಚಿಕೊಂಡು ಕೆಳಗೆ ಚಲಿಸಿದೆ. ಈ ವೇಳೆ ಬಾಲಕನ ತಲೆ ಲಿಫ್ಟ್‌ನ ಸಂದಿಗೆ ಸಿಲುಕಿದಾಗ ಆತ ನೋವಿನಿಂದ ಚೀರಾಡಿದ್ದಾನೆ. ಇದನ್ನು ಕೇಳಿದ ತಾಯಿ ಆತಂಕದಲ್ಲಿ ಬೊಬ್ಬೆ ಹಾಕಿದ್ದಾರೆ.

    ಕೂಡಲೇ ಫ್ಲ್ಯಾಟ್‌ನಲ್ಲಿದ್ದ ಉಳಿದವರು ಓಡಿ ಬಂದಿದ್ದು, ಲಿಫ್ಟ್‌ ಬಾಗಿಲು ತೆರೆಯಲು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಕೂಡಲೇ ಪೊಲೀಸರು, ಅಗ್ನಿಶಾಮಕ ದಳಕ್ಕೆ ಸೂಚನೆ ನೀಡಲಾಯಿತು. ಆದರೆ ಬಾಲಕನಿದ್ದ ಲಿಫ್ಟ್‌ ಒಳಗಡೆಯಿಂದ ಪ್ರತಿಕ್ರಿಯೆ ಬಾರದಿದ್ದಾಗ ಆತಂಕಕ್ಕೀಡಾದ ಸ್ಥಳೀಯರು ಬಾಗಿಲು ಮುರಿದು ಲಿಫ್ಟ್‌ ಓಪನ್‌ ಮಾಡಿದ್ದಾರೆ. ಬಳಿಕ ಕಷ್ಟಪಟ್ಟು ಬಾಲಕನನ್ನು ಹೊರಗೆ ತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.ಆದರೆ ಅಷ್ಟಾರಲ್ಲಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಳೆಯ ಮಾದರಿಯ ಲಿಪ್ಟ್ ಆಗಿದ್ದರಿಂದ ಸೆನ್ಸಾರ್ ವ್ಯವಸ್ಥೆ ಲಿಪ್ಟ್ ನಲ್ಲಿ ಇಲ್ಲದೇ ಇರುವುದ ಈ ಘಟನೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply