ಹಾನಗಲ್ ತಾಲೂಕಿನ ಆರೆಗೊಪ್ಪ ಗ್ರಾಮದ ಮಹಾಬಲೇಶ್ವರ ಸಂಕಪಾಳೆ(38) ಎಂಬವನು ಸ್ಥಳದಲ್ಲಿಯೆ ಮೃತಪಟ್ಟರೆ, ಹುಡೆ ಗ್ರಾಮದ ಜಾಫರಸಾಬ ದೇವಿಹೋಸೂರ(32) ಎಂಬವರು ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಮುಂಡಗೋಡಿನಿಂದ ಹಾನಗಲ್‌ಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಪಾಳಾದಿಂದ ಮುಂಡಗೋಡನತ್ತ ಬರುತ್ತಿದ್ದ ಬೈಕ್ ನಡುವೆ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ತಾಲೂಕಿನ ಶಿಂಗ್ನಳ್ಳಿ ಜಲಾಶಯ ಕ್ರಾಸ್ ಸನಿಹ ಡಿಕ್ಕಿ ಸಂಭವಿಸಿತ್ತು. ಮುಂಡಗೋಡ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.