FILM
ರಿಷಬ್ ಶೆಟ್ಟಿಗೆ ಸಿಕ್ಕಿ ಪ್ರಶಸ್ತಿ ಬಗ್ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಭಾರೀ ಆಕ್ರೋಶ..!
ಕನ್ನಡದ ನಟ ರಿಷಬ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿಯಲ್ಲಿ ಬೆಸ್ಟ್ ಪ್ರಾಮಿಸಿಂಗ್ ಆಯಕ್ಟರ್ ಪ್ರಶಸ್ತಿ ಬಂತು. ರಿಷಬ್ ಶೆಟ್ಟಿಗೆ ಈ ಅವಾರ್ಡ್ ಸಿಕ್ಕಿದ್ದಕ್ಕೆ ಅವ್ರ ಅಭಿಮಾನಿಗಳು ಹಾಗೂ ಕನ್ನಡ ಕಲಾರಸಿಕರು ಸಂತಸಗೊಂಡರು. ಆದ್ರೆ ರಿಷಬ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿಯಿಂದ ಮೋಸ ಆಗಿದೆಯಂತೆ.
ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ರಿಷಬ್ ಶೆಟ್ಟಿ ಅವರಿಗೆ ಬೆಸ್ಟ್ ಪ್ರಾಮಿಸಿಂಗ್ ಆಯಕ್ಟರ್ ಅವಾರ್ಡ್ ಬಂದಿದ್ದಕ್ಕೆ, ನಾವು ನೀವು ಎಲ್ಲರೂ ಸಂಭ್ರಮಿಸಿದ್ರಿ. ಯಶ್, ಸುದೀಪ್ ನಂತರ ಈ ಪ್ರಶಸ್ತಿ ಪಡೆದ ಕನ್ನಡದ 3ನೇ ನಟ ಅಂತ ಹಿರಿ ಹಿರಿ ಹಿಗ್ಗಿದ್ದಿವಿ. ಆದ್ರೆ, ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಅವಾರ್ಡ್ನಲ್ಲಿ ಮೋಸ ನಡೆದೀದೆ. ರಿಷಬ್ ಶೆಟ್ಟಿಗೆ ಅನ್ಯಾಯ ಆಗಿದೆ ಅಂತ ಯಾರೊಬ್ಬರಿಗೂ ಅನಿಸಿಲ್ಲ. ಬಟ್ ಇಂಥಾದೊಂದು ಚರ್ಚೆ, ಪ್ರಶ್ನೆ ಈಗ ಬಾಲಿವುಡ್ ಲೋಕವನ್ನ ಆವರಿಸಿದ್ದು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ.
ಪ್ರತಿ ವರ್ಷ ಮುಂಬೈನಲ್ಲಿ ನಡೆಯೋ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ವರ್ಷ ಕಾಂತಾರ ಹಿಂದಿ ಸಿನಿಮಾಗಾಗಿ ರಿಷಬ್ ಶೆಟ್ಟಿ ಬೆಸ್ಟ್ ಪ್ರಾಮಿಸಿಂಗ್ ಆಯಕ್ಟರ್ ಅವಾರ್ಡ್ ಪಡೆದ್ರು. ಆದ್ರೆ, ರಿಷಬ್ಗೆ ಬೆಸ್ಟ್ ಆಯಕ್ಟರ್ ಅವಾರ್ಡ್ ಕೊಡಬೇಕಿತ್ತು ಅಂತ ನಟಿ ಕಂಗನಾ ರಣಾವತ್ ಧ್ವನಿ ಎತ್ತಿದ್ದಾರೆ. ಅರ್ಹರಿಗೆ ಕೊಡಬೇಕಾದ ಪ್ರಶಸ್ತಿಯನ್ನ ಸ್ಟಾರ್ ಮಕ್ಕಳಿಗೆ ಕೊಟ್ಟು ನಿಜವಾದ ಪ್ರತಿಭೆಗಳಿಗೆ ಅನ್ಯಾಯ ಮಾಡಿದ್ದಾರೆ ಅಂತ ಟೀಕಿಸಿದ್ದಾರೆ. ಕಂಗನಾ ಅವ್ರ ಈ ವಾದ ಈಗ ಬಾಲಿವುಡ್ ಸ್ಟಾರ್ ಕಿಡ್ಗಳ ಖುಷಿನ ಕಿತ್ತುಕೊಳ್ಳೋಥಾರ ಮಾಡಿದೆ.
ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿಯಲ್ಲಿ ರಣಬೀರ್ ಕಪೂರ್ ಬೆಸ್ಟ್ ಆಯಕ್ಟರ್ ಹಾಗೂ ಆಲಿಯಾ ಭಟ್ ಬೆಸ್ಟ್ ಆಯಕ್ಟ್ರೆಸ್ ಪ್ರಶಸ್ತಿ ಪಡೆದಿದ್ರು. ಇದನ್ನು ಖಂಡಿಸಿದ ಕಂಗನಾ, ಅತ್ಯುತ್ತಮ ನಟ ರಿಷಬ್ ಶೆಟ್ಟಿ ಹಾಗೂ ಸೀತಾರಾಮ ಚಿತ್ರದ ನಟನೆಯಿಂದ ಪ್ಯಾನ್ ಇಂಡಿಯಾ ಗಮನ ಸೆಳೆದ ನಟಿ ಮೃಣಾಲ್ ಠಾಕೂರ್ಗೆ ಬೆಸ್ಟ್ ಆಯಕ್ಟ್ರೆಸ್ ಅವಾರ್ಡ್ ಕೊಡಬೇಕಿತ್ತು ಅಂತ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ತ್ರಿಬಲ್ ಆರ್ ನಿರ್ದೇಶಕ ರಾಜಮೌಳಿಗೆ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ಕೊಡಬೇಕಿತ್ತು. ಅವರ ಬದಲು ಕಾಶ್ಮೀರಿ ಫೈಲ್ಸ್ ನಿರ್ದೇಶಕನಿಗೆ ಕೊಟ್ಟಿರೋದು ಬಾಲಿವುಡ್ ಮಾಫಿಯಾ ಕಾರಣ ಅಂತ ಕಾಲೆಳೆದಿದ್ದಾರೆ.