Connect with us

    LATEST NEWS

    ಮಂಗಳೂರು – ಪಿಕಪ್ ಸಡನ್ ಬ್ರೇಕ್ ಗೆ ಕಾರಿನೊಳಗೆ ನುಗ್ಗಿದ ಅಲ್ಯುಮಿನಿಯಂ ಪಟ್ಟಿ

    ಮಂಗಳೂರು ಫೆಬ್ರವರಿ 23: ಅಲ್ಯುಮಿನಿಯಂ ಪಟ್ಟಿ ಕೊಂಡೊಯ್ಯುತ್ತಿದ್ದ ಪಿಕಪ್ ವಾಹನ ಸಡನ್ ಬ್ರೇಕ್ ಹಾಕಿದ ಪರಿಣಾಮ ಅಲ್ಯುಮಿನಿಯಂ ಪಟ್ಟಿಗಳು ಹಿಂದೆ ಬರುತ್ತಿದ್ದ ಕಾರಿನೊಳಗೆ ನುಗ್ಗಿದ ಘಟನೆ ನಂತೂರು ಸರ್ಕಲ್ ಬಳಿ ನಡೆದಿದೆ.


    ಈ ಘಟನೆಯಲ್ಲಿ ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಅವರು ಪವಾಡ ಸದೃಶ್ಯವಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕೆಪಿಟಿ ಕಡೆಯಿಂದ ಪಂಪ್‌ವೆಲ್ ಕಡೆಗೆ ಹೋಗುತ್ತಿದ್ದ ಕಾರಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುತ್ತಿದ್ದ ಪಿಕಪ್ ವಾಹನದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರು. ಅವರೂ ಬ್ರೇಕ್‌ ಹಾಕಿದಾಗ ಆ ವಾಹನದಲ್ಲಿದ್ದ ಅಲ್ಯುಮಿನಿಯಂ ಪಟ್ಟಿಗಳು ಕಾರಿನೊಳಗೆ ತೂರಿಹೋಗಿದ್ದವು.

     

    Share Information
    Advertisement
    Click to comment

    You must be logged in to post a comment Login

    Leave a Reply