Connect with us

    FILM

    ರಿಷಬ್​ ಶೆಟ್ಟಿಗೆ ಸಿಕ್ಕಿ ಪ್ರಶಸ್ತಿ ಬಗ್ಗೆ ಬಾಲಿವುಡ್​ ನಟಿ ಕಂಗನಾ ರಣಾವತ್​​ ಭಾರೀ ಆಕ್ರೋಶ..!

    ನ್ನಡದ ನಟ ರಿಷಬ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿಯಲ್ಲಿ ಬೆಸ್ಟ್ ಪ್ರಾಮಿಸಿಂಗ್ ಆಯಕ್ಟರ್ ಪ್ರಶಸ್ತಿ ಬಂತು. ರಿಷಬ್ ಶೆಟ್ಟಿಗೆ ಈ ಅವಾರ್ಡ್ ಸಿಕ್ಕಿದ್ದಕ್ಕೆ ಅವ್ರ ಅಭಿಮಾನಿಗಳು ಹಾಗೂ ಕನ್ನಡ ಕಲಾರಸಿಕರು ಸಂತಸಗೊಂಡರು. ಆದ್ರೆ ರಿಷಬ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿಯಿಂದ ಮೋಸ ಆಗಿದೆಯಂತೆ.

    ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ರಿಷಬ್​ ಶೆಟ್ಟಿ ಅವರಿಗೆ ಬೆಸ್ಟ್ ಪ್ರಾಮಿಸಿಂಗ್ ಆಯಕ್ಟರ್​ ಅವಾರ್ಡ್ ಬಂದಿದ್ದಕ್ಕೆ, ನಾವು ನೀವು ಎಲ್ಲರೂ ಸಂಭ್ರಮಿಸಿದ್ರಿ. ಯಶ್​, ಸುದೀಪ್ ನಂತರ ಈ ಪ್ರಶಸ್ತಿ ಪಡೆದ ಕನ್ನಡದ 3ನೇ ನಟ ಅಂತ ಹಿರಿ ಹಿರಿ ಹಿಗ್ಗಿದ್ದಿವಿ. ಆದ್ರೆ, ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಅವಾರ್ಡ್​ನಲ್ಲಿ ಮೋಸ ನಡೆದೀದೆ. ರಿಷಬ್ ಶೆಟ್ಟಿಗೆ ಅನ್ಯಾಯ ಆಗಿದೆ ಅಂತ ಯಾರೊಬ್ಬರಿಗೂ ಅನಿಸಿಲ್ಲ. ಬಟ್ ಇಂಥಾದೊಂದು ಚರ್ಚೆ, ಪ್ರಶ್ನೆ ಈಗ ಬಾಲಿವುಡ್​ ಲೋಕವನ್ನ ಆವರಿಸಿದ್ದು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ.

    ಪ್ರತಿ ವರ್ಷ ಮುಂಬೈನಲ್ಲಿ ನಡೆಯೋ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ವರ್ಷ ಕಾಂತಾರ ಹಿಂದಿ ಸಿನಿಮಾಗಾಗಿ ರಿಷಬ್ ಶೆಟ್ಟಿ ಬೆಸ್ಟ್ ಪ್ರಾಮಿಸಿಂಗ್ ಆಯಕ್ಟರ್ ಅವಾರ್ಡ್ ಪಡೆದ್ರು. ಆದ್ರೆ, ರಿಷಬ್​ಗೆ ಬೆಸ್ಟ್ ಆಯಕ್ಟರ್ ಅವಾರ್ಡ್ ಕೊಡಬೇಕಿತ್ತು ಅಂತ ನಟಿ ಕಂಗನಾ ರಣಾವತ್ ಧ್ವನಿ ಎತ್ತಿದ್ದಾರೆ. ಅರ್ಹರಿಗೆ ಕೊಡಬೇಕಾದ ಪ್ರಶಸ್ತಿಯನ್ನ ಸ್ಟಾರ್​ ಮಕ್ಕಳಿಗೆ ಕೊಟ್ಟು ನಿಜವಾದ ಪ್ರತಿಭೆಗಳಿಗೆ ಅನ್ಯಾಯ ಮಾಡಿದ್ದಾರೆ ಅಂತ ಟೀಕಿಸಿದ್ದಾರೆ. ಕಂಗನಾ ಅವ್ರ ಈ ವಾದ ಈಗ ಬಾಲಿವುಡ್​ ಸ್ಟಾರ್​ ಕಿಡ್​ಗಳ ಖುಷಿನ ಕಿತ್ತುಕೊಳ್ಳೋಥಾರ ಮಾಡಿದೆ.

    ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿಯಲ್ಲಿ ರಣಬೀರ್​ ಕಪೂರ್ ಬೆಸ್ಟ್ ಆಯಕ್ಟರ್ ಹಾಗೂ ಆಲಿಯಾ ಭಟ್ ಬೆಸ್ಟ್ ಆಯಕ್ಟ್ರೆಸ್​ ಪ್ರಶಸ್ತಿ ಪಡೆದಿದ್ರು. ಇದನ್ನು ಖಂಡಿಸಿದ ಕಂಗನಾ, ಅತ್ಯುತ್ತಮ ನಟ ರಿಷಬ್​ ಶೆಟ್ಟಿ ಹಾಗೂ ಸೀತಾರಾಮ ಚಿತ್ರದ ನಟನೆಯಿಂದ ಪ್ಯಾನ್ ಇಂಡಿಯಾ ಗಮನ ಸೆಳೆದ ನಟಿ ಮೃಣಾಲ್ ಠಾಕೂರ್​ಗೆ ಬೆಸ್ಟ್ ಆಯಕ್ಟ್ರೆಸ್​ ಅವಾರ್ಡ್ ಕೊಡಬೇಕಿತ್ತು ಅಂತ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ತ್ರಿಬಲ್ ಆರ್ ನಿರ್ದೇಶಕ ರಾಜಮೌಳಿಗೆ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ಕೊಡಬೇಕಿತ್ತು. ಅವರ ಬದಲು ಕಾಶ್ಮೀರಿ ಫೈಲ್ಸ್​ ನಿರ್ದೇಶಕನಿಗೆ ಕೊಟ್ಟಿರೋದು ಬಾಲಿವುಡ್ ಮಾಫಿಯಾ ಕಾರಣ ಅಂತ ಕಾಲೆಳೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply