KARNATAKA
ಸಿಇಟಿ ಪರೀಕ್ಷೆಯಂದೇ ಪ್ರಮಾಣ ವಚನ ಬೇಕಿತ್ತಾ- ಬಿ.ಎಲ್. ಸಂತೋಷ್

ಬೆಂಗಳೂರು ಮೇ 20 : ನೀಟ್ ಪರೀಕ್ಷೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೇಸ್ ನಾಯಕರಿಗೆ ಇದೀಗ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, ಸಿಇಟಿ ಯಂದೇ ನಿಮಗೆ ಪ್ರಮಾಣ ವಚನ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ಶನಿವಾರ ಸಿಇಟಿ ಪರೀಕ್ಷೆ ನಡೆಯಲಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಪ್ರಮಾಣ ವಚನ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಪ್ರಮಾಣ ವಚನ ಕಾರ್ಯಕ್ರಮವನ್ನು ಒಂದೆರಡು ದಿನ ಮುಂದೂಡಬಹುದಲ್ಲವೇ ಎಂದು ಬಿ.ಎಲ್.ಸಂತೋಷ್ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಟ್ ಪರೀಕ್ಷೆ ದಿನ ಪ್ರಧಾನಿ ಮೋದಿ ರೋಡ್ ಶೋ ಮಾಡುವುದನ್ನು ಆಕ್ಷೇಪಿಸಿ ಟ್ವೀಟ್ ಮಾಡಿದ್ದರು. ನೀಟ್ ಪರೀಕ್ಷಾರ್ಥಿಗಳು ಮತ್ತು ಬೆಂಗಳೂರಿನ ಜನರ ವಿರೋಧವನ್ನು ಧಿಕ್ಕರಿಸಿ ನರೇಂದ್ರ ಮೋದಿ ನಡೆಸಲಿರುವ ರೋಡ್ ಶೋ ಬೇಜವಾಬ್ದಾರಿತನದ ನಡೆ. ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ ಎಂದೂ ಪ್ರಶ್ನಿಸಿದ್ದರು ಎಂಬುದನ್ನು ನೆನಪಿಸಿದ್ದಾರೆ.
ನಮ್ಮ ನಿಯೋಜಿತ ಸಿಎಂ ಇದನ್ನು ಟ್ವೀಟ್ ಮಾಡಿ ಹಲವು ದಿನಗಳು ಕಳೆದಿಲ್ಲ. ಶನಿವಾರ ರಾಜ್ಯ ಮತ್ತು ಬೆಂಗಳೂರಿನಾದ್ಯಂತ ಸಿಇಟಿ ಪರೀಕ್ಷೆಗಳು ನಡೆಯುತ್ತಿದ್ದು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿಮ್ಮ ಪ್ರಮಾಣ ವಚನ ಸ್ವೀಕಾರವನ್ನು ಒಂದು ದಿನ ಅಥವಾ ಎರಡು ದಿನ ಮುಂದೂಡಿದರೆ ಏನಾಗುತ್ತಿತ್ತು ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಸಂತೋಷ್ ಪ್ರಶ್ನಿಸಿದರು. ಈಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಏನಾಗಿದೆ. ಅವರು ಪ್ರಮಾಣ ವಚನ ಸ್ವೀಕರಿಸುವುದನ್ನು ಮುಂದೂಡಿದರೆ ವಿದ್ಯಾರ್ಥಿಗಳಿಗೆ ಆಗುವ ತೊಂದರೆ ತಪ್ಪುತ್ತದೆ ಎಂದು ಎಂದಿದ್ದಾರೆ.