Connect with us

  LATEST NEWS

  ಪ್ರಥಮ ವರ್ಷದ ನರ್ಸಿಂಗ್ ವಿಧ್ಯಾರ್ಥಿನಿ ನಾಪತ್ತೆ…!!

  ಮಂಗಳೂರು ಮೇ 20: ಪ್ರಥಮ ವರ್ಷದ ನರ್ಸಿಂಗ್‌ ವ್ಯಾಸಂಗ ಮಾಡುತ್ತಿದ್ದ ವಿಧ್ಯಾರ್ಥಿನಿ ನಾಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಯುವತಿಯನ್ನು ಆಸ್ಮಾ ಬಾನೊ ಎಂದು ಗುರುತಿಸಲಾಗಿದ್ದು, ಇವರು ಮೇ 15ರಂದು ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ.


  ಮೇ 15ರಂದು ಬೆಳಗ್ಗೆ 9.15ಕ್ಕೆ ಮನೆಯಿಂದ ವ್ಯಾಸಂಗ ಮಾಡುತ್ತಿದ್ದ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ತೆರಳಿದ್ದರು. ಅನಂತರ ಮನೆಗೆ ಬರಲಿಲ್ಲ. 18 ವರ್ಷದ ಅವರು ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆ ಬಲ್ಲರು. ಈ ಬಗ್ಗೆ ಕಾಣೆಯಾದವರ ತಂದೆ ಮಹಮ್ಮದ್‌ ಖಾಲಿಕ್‌ ಅವರು ಮಂಗಳೂರು ಪೂರ್ವ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಮಂಗಳೂರು ಪೂರ್ವ ಪೊಲೀಸ್‌ ಠಾಣೆ ದೂರವಾಣಿ ಸಂಖ್ಯೆ 0824-2220520 ಅಥವಾ ಜಿಲ್ಲಾ ಕಂಟ್ರೋಲ್‌ ರೂಂ 2220800, 2220801 ಅನ್ನು ಸಂಪರ್ಕಿಸುವಂತೆ ಪೊಲೀಸ್‌ ಪ್ರಕಟನೆ ತಿಳಿಸಿದೆ

  Share Information
  Advertisement
  Click to comment

  You must be logged in to post a comment Login

  Leave a Reply