Connect with us

    LATEST NEWS

    ಕೊನೆಗೂ ಬಿಡುಗಡೆಯಾದ ಬಿಜೆಪಿಯ ಮೊದಲ ಪಟ್ಟಿ – ರಘುಪತಿ ಭಟ್, ಲಾಲಾಜಿ ಗೆ ಮಿಸ್ ಆದ ಟಿಕೆಟ್

    ಮಂಗಳೂರು ಎಪ್ರಿಲ್ 11; ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೊನೆಗೂ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆಯಾಗಿದೆ. ಕಾಂಗ್ರೇಸ್ ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರೂ ಕೂಡ ಬಿಜೆಪಿ ತನ್ನ ಪಟ್ಟಿ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದ್ದರೂ , ಇದೀಗ ದೆಹಲಿಯಲ್ಲಿ 189 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

    ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧರ್ಮೇಂದ್ರ ಪ್ರಧಾನ ಮೊದಲ ಪಟ್ಟಿಯಲ್ಲಿ189 ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ ಎಂದರು. 52 ಹೊಸ ಮುಖಗಳಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ. ಬಿಡುಗಡೆಯಾಗಿರುವ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

    ಕುಂದಾಪುರ– ಕಿರಣ್‌ ಕುಮಾರ್‌ ಕೊಡ್ಗಿ

    ಉಡುಪಿ– ಯಶ್ಪಾಲ್‌ ಸುವರ್ಣ

    ಕಾಪು– ಗುರ್ಮೆ ಸುರೇಶ್‌ ಶೆಟ್ಟಿ

    ಕಾರ್ಕಳ– ವಿ. ಸುನಿಲ್‌ ಕುಮಾರ್‌

     

    ಬೈಂದೂರು ಅಭ್ಯರ್ಥಿ ಇನ್ನು ಘೋಷಣೆಯಾಗಿಲ್ಲ

    Share Information
    Advertisement
    Click to comment

    You must be logged in to post a comment Login

    Leave a Reply