KARNATAKA
ಕಾರ್ಕಳದಲ್ಲಿ ಪರಶುರಾಮನನ್ನು ಹರಿದು ತಿಂದ ಬಿಜೆಪಿ -ಕಾಂಗ್ರೆಸ್, ದೂರು,ಪ್ರತಿದೂರು ದಾಖಲು..!
ಕಾರ್ಕಳ : ತುಳುನಾಡಿನ ಸೃಷ್ಟಿಕರ್ತ ಪರಶುರಾಮನ ಮೂರ್ತಿ ವಿವಾದ ಕಾರ್ಕಳದಲ್ಲಿ ದಿನದಿಂದ ದಿನಕ್ಕೆ ಉಲ್ಬಣಗೊಂಡು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಗೆ ಆಹಾರವಾಗಿದೆ.
ಬೈಲೂರಿನ ಥೀಂ ಪಾರ್ಕಿನಲ್ಲಿ ನಿರ್ಮಾಣಗೊಂಡ ಬೃಹತ್ ಪರಶುರಾಮ ಮೂರ್ತಿಯ ಸತ್ಯಾಸತ್ಯತೆ ವಿಚಾರದಲ್ಲಿ ಜಟಾಪಟಿ ಮುಂದುವರೆದಿದ್ದು ಪ್ರತ್ಯೇಕ ಎರಡು ಪ್ರಕರಣಗಳು ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದೆ, ಪರಶುರಾಮನ ಮೂರ್ತಿ ಕಂಚಿನದ್ದು ಅಲ್ಲ ಎಂದು ಸಾಬೀತು ಮಾಡುವ ಸಲುವಾಗಿ ಮೂರ್ತಿಯ ರಕ್ಷಣಾ ಕವಚ, ಮೂರ್ತಿಯ ಫಿನಿಶಿಂಗ್ ಲೇಪನ ಹರಿದಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ವಿರುದ್ದ ದೂರು ದಾಖಲಾಗಿದೆ. ರಿಯಾಲಿಟಿ ಚೆಕ್ ಹೆಸರಲ್ಲಿ ಮೂರ್ತಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹತ್ತಿ ಅದನ್ನು ಸಾಬೀತುಪಡಿಸಲು ಹೋಗಿ ಮೂಲ ಸ್ವರೂಪ ವಿರೂಪಗೊಳಿಸಿದ ಕುರಿತು ಕಾರ್ಕಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮತ್ತೊಂದೆಡೆ ಸರ್ಕಾರಿ ಸೊತ್ತು ನಷ್ಟ- ಸುಳ್ಳು ಸುದ್ದಿ ಹರಡಿಸಿರುವ ಬಗ್ಗೆ ಕಾರ್ಕಳ ಠಾಣೆಯಲ್ಲಿ ದೂರು ದಾಖಲಾಗಿದೆ. ಕಂಚಿನ ಮೂರ್ತಿ ಎಂದು ಸಾಭೀತುಪಡಿಸಲು ಹೊರಟ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ದಾಖಲಾಗಿದೆ. ಪರಶುರಾಮನ ಪಾದಕ್ಕೆ ಸುತ್ತಿಗೆಯಿಂದ ಹೊಡೆದು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ ನೀಡಲು ರಿಯಾಲಿಟಿ ಚೆಕ್ ಮಾಡಲು ಹೋಗಿ ಸಾರ್ವಜನಿಕ ಆಸ್ತಿ ಹಾನಿ, ಧಾರ್ಮಿಕ ಭಾವನೆಗೆ ದಕ್ಕೆಯಾಗಿರುವ ಬಗ್ಗೆ ಮತ್ತು ಧಾರ್ಮಿಕ ಸ್ಥಳ ಅಪವಿತ್ರಗೊಳಿಸಿರುವ ಬಗ್ಗೆ ಪೊಲೀಸ್ ಕೇಸ್ ದಾಖಲು ಮಾಡಿದ್ದಾರೆ. ಎರಡು ತಿಂಗಳು ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಿದ್ದರೂ ಅಕ್ರಮ ಪ್ರವೇಶ ಮಾಡಿದ ದಿವ್ಯಾ ನಾಯಕ್ ಎಂಬವರಿಂದ ಬಿಜೆಪಿ ಮೇಲೆ ದೂರು ದಾಖಲು ಮಾಡಿದ್ದು. ರಾಜಕೀಯ ಜಿದ್ದಿಜಿದ್ದಿಯಿಂದ ತುಳುನಾಡಿನ ಜನರ ಹೃದಯದಲ್ಲಿರಬೇಕಾಗಿದ್ದ ಪರಶುರಾಮ ರಾಜಕೀಯ ದಾಳಕ್ಕೆ ಬಲಿಯಾಗಿ ಪರಿತಪಿಸುತ್ತಿದ್ದಾರೆ.