LATEST NEWS
ರಾಹುಲ್ ಪ್ರಶ್ನೆಗಳಿಗೆ ಮರು ಪ್ರಶ್ನೆ ಕೇಳಿದ ಬಿಜೆಪಿ
ರಾಹುಲ್ ಪ್ರಶ್ನೆಗಳಿಗೆ ಮರು ಪ್ರಶ್ನೆ ಕೇಳಿದ ಬಿಜೆಪಿ
ಮಂಗಳೂರು ಎಪ್ರಿಲ್ 26: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಜೆಪಿ 10 ಪ್ರಶ್ನೆಗಳನ್ನು ಕೇಳಿದೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಕಾಂಗ್ರೇಸ್ ಕರ್ನಾಟಕದ ಜನತೆಗೆ ಮೋಸ ಮಾಡಿದೆ. ಈ ಬಾರಿ ಚುನಾವಣೆ ಕರ್ನಾಟಕದ ಚುನಾವಣೆ ಮತ್ತು ಸುಳ್ಳುಗಳ ನಡುವೆ ಎಂದು ಹೇಳಿದರು.
ರಾಹುಲ್ ಗಾಂಧಿ ತಮ್ಮ ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಪ್ರಶ್ನೆಗಳನ್ನು ಕೇಳುತ್ತಾರೆ, ಈ ಬಾರಿ ಬಿಜೆಪಿ ರಾಹುಲ್ ಗಾಂಧಿಗೆ ಕರ್ನಾಟಕ ಚುನಾವಣೆ ಹಿನ್ನಲೆಯಲ್ಲಿ 10 ಪ್ರಶ್ನೆಗಳನ್ನು ಕೇಳಿದೆ.
1.ರಾಜ್ಯದಲ್ಲಿ ನಡೆದ ರೈತರ ಆತ್ಮಹತ್ಯೆ ಬಗ್ಗೆ ನಿಮ್ಮ ಉತ್ತರವೇನು?
2.ರೈತರಿಗೆ ರಾಜ್ಯ ಸರ್ಕಾರ ನಡೆಸಿದ ಲಾಠಿಚಾರ್ಜ್ ಬಗ್ಗೆ ನಿಮ್ಮ ಉತ್ತರವೇನು?
3.ಕರ್ನಾಟಕದಲ್ಲಿ ನಡೆದ ನೀರಾವರಿ ಭೃಷ್ಟಾಚಾರ ದ ಬಗ್ಗೆ ನಿಮ್ಮ ಉತ್ತರವೇನು?
4.ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ನಿಮ್ಮ ಉತ್ತರವೇನು?
5.ಲೋಕಯುಕ್ತ ವನ್ನು ತುರ್ಜಮೆ ಮಾಡಿದ್ದೇಕೆ?
6.800 ದಲಿತ ಮಹಿಳೆಯ ಅತ್ಯಾಚಾರವಾಗಿದೆ,ಸಾವಿರಾರು ಮಹಿಳೆಯರಿಗೆ ಶೋಷಣೆಯಾಗಿದೆ.ಒಮ್ಮೆಯಾದರೂ ಕ್ಯಾಂಡಲ್ ಲೈಟ್ ಯಾತ್ರೆ ಮಾಡಿದ್ದೀರಾ?
7.ರಾಜ್ಯದಲ್ಲಿ ಕೋಮುಗಲಭೆ, ಕೊಲೆಗಳು ನಡೆದಿದೆ.ಇದಕ್ಕೆ ನಿಮ್ಮ ಉತ್ತರವೇನು?
8.ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿದಿನ ಶಿಶುಮರಣವಾಗುತ್ತಿದೆ.ರಾಜ್ಯದ ಬಡವರ ಸಂಕಷ್ದದ ಬಗ್ಗೆ ಉತ್ತರವೇನು?
9.ರಾಜ್ಯದಿಂದ ಕೇಂದ್ರಕ್ಕೆ ಬಂದ ಅನುದಾನ ಎಷ್ಟು?ರಾಜ್ಯ ಅದರಲ್ಲಿ ಬಳಕೆ ಮಾಡಿದ ಹಣ ಎಷ್ಟು?
10.ರಾಹುಲ್ ಗಾಂಧಿ ಗೆ ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ ಯಾವ ವ್ಯವಸ್ಥೆಯ ಮೇಲೂ ನಂಬಿಕೆಯಿಲ್ಲ..ನಿಮಗೆ ರಾಜ್ಯದ ಕಾಂಗ್ರೆಸ್ ಬಗ್ಗೆ ನಂಬಿಕೆ ಇದ್ಯಾ?
ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರಿಗೆ ಬಿಜೆಪಿ ಈ 10 ಪ್ರಶ್ನೆಗಳನ್ನು ಕೇಳಿದ್ದು, ರಾಹುಲ್ ಗಾಂಧಿಯವರ ಉತ್ತರವೇನಿರಬಹುದು ಎನ್ನುವುದು ಕುತೂಹಲ ಮೂಡಿಸಿದೆ.
You must be logged in to post a comment Login